ADVERTISEMENT

ಲವ್‌ ಜಿಹಾದ್‌: ಸುಪ್ರೀಂ ಕೋರ್ಟ್ ತರಾಟೆ

ಪಿಟಿಐ
Published 2 ಜನವರಿ 2025, 16:03 IST
Last Updated 2 ಜನವರಿ 2025, 16:03 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ‘ಲವ್‌ ಜಿಹಾದ್‌’ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಬರೇಲಿ ನ್ಯಾಯಾಲಯ ಮಾಡಿದ್ದ ಕೆಲ ಅವಲೋಕನಗಳನ್ನು ಅಳಿಸಿ ಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿದತು.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ಪೀಠವು, ‘ಸಾಕ್ಷ್ಯಗಳ ಆಧಾರದ ಮೇಲೆ ಮಾಡಿದ ಅವಲೋಕನಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿತು.

ADVERTISEMENT

‘ನೀವು ಯಾರು ಮತ್ತು ಈ ವಿಷಯ ನಿಮಗೆ ಹೇಗೆ ಸಂಬಂಧಿಸುತ್ತದೆ’ ಎಂದು ಪ್ರಶ್ನಿಸಿದ ಪೀಠ, ‘ಇದನ್ನು ನೀವು ಉತ್ಪ್ರೇಕ್ಷಿಸುವುದು ಸರಿಯಲ್ಲ’ ಎಂದು ಖಾರವಾಗಿ ಹೇಳಿತು.

ಅರ್ಜಿಯನ್ನು ಹಿಂಪಡೆಯಲು ಸಿದ್ಧರಿದ್ದೀರಾ ಎಂದು ಅರ್ಜಿದಾರರನ್ನು ಕೇಳಿದ ಪೀಠವು, ಇಲ್ಲದಿದ್ದರೆ ವಜಾಗೊಳಿಸಬೇಕಾಗುತ್ತದೆ ಎಂದಿತು. ಅರ್ಜಿದಾರರ ಪರ ವಕೀಲರು ಅರ್ಜಿಯನ್ನು ಹಿಂಪಡೆಯುವುದಾಗಿ ಹೇಳಿದರು. ಅದಕ್ಕೆ ಪೀಠ ಅನುಮತಿ ನೀಡಿತು.

ಏನಿದು ಪ್ರಕರಣ:

‘ನಿರ್ದಿಷ್ಟ ಧರ್ಮವೊಂದರ ಸಮಾಜ ವಿರೋಧಿಗಳು ಜನಸಂಖ್ಯಾ ಸಮರ, ಅಂತರರಾಷ್ಟ್ರೀಯ ಪಿತೂರಿ ಮೂಲಕ ಭಾರತದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದೇ ಲವ್‌ ಜಿಹಾದ್‌ನ ಗುರಿಯಾಗಿದೆ’ ಎಂದು ಉತ್ತರ ಪ್ರದೇಶದ ಬರೇಲಿಯ ತ್ವರಿತಗತಿ ನ್ಯಾಯಾಲಯವು 2014ರ ಅಕ್ಟೋಬರ್‌ನಲ್ಲಿ ಹೇಳಿತ್ತು.

ಮೊಹಮ್ಮದ್ ಅಲಿಂ (25) ಎನ್ನುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಈ ಮಾತುಗಳನ್ನು ಹೇಳಿದ್ದರು.

ಅಲಿಂ, ತಮ್ಮ ಹೆಸರು ಆನಂದ್ ಕುಮಾರ್‌ ಎಂದು ಹೇಳಿಕೊಂಡು ವಿದ್ಯಾರ್ಥಿನಿಯನ್ನು ವಂಚಿಸಿದ್ದರು. ಅವರು ಆನಂದ್ ಅಲ್ಲ ಎಂಬುದು ಗೊತ್ತಾದ ನಂತರ ವಿದ್ಯಾರ್ಥಿನಿ ದೂರು ದಾಖಲಿಸಿದ್ದರು. ಕೋಚಿಂಗ್ ಕೇಂದ್ರವೊಂದರಲ್ಲಿ ಅಲಿಂ ಈ ವಿದ್ಯಾರ್ಥಿನಿಯನ್ನು ಭೇಟಿ ಮಾಡಿದ್ದರು. ಬಳಿಕ ಆಕೆಯನ್ನು ವರಿಸಿದ್ದರು. ವಿವಾಹವಾದ ಬಳಿಕ ವಿದ್ಯಾರ್ಥಿನಿಗೆ ತನ್ನ ಪತಿ ಆನಂದ್‌ ಅಲ್ಲ, ಅಲಿಂ ಎಂಬುದು ಮತ್ತು ಅವರು ಮುಸ್ಲಿಂ ಎಂಬುದು ಗೊತ್ತಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.