ADVERTISEMENT

ಚಂದ್ರಬಾಬು ನಾಯ್ಡು ಮೇಲೆ ದಾಳಿ ಮಾಡಿದ್ದ ನಕ್ಸಲ್ ಚಲಪತಿ ಪತ್ನಿ ಅರುಣಾ

ಪಿಟಿಐ
Published 19 ಜೂನ್ 2025, 20:19 IST
Last Updated 19 ಜೂನ್ 2025, 20:19 IST
ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು   

ರಂಪಛೋಡವರಂ (ಆಂಧ್ರಪ್ರದೇಶ): ಪೊಲೀಸರ ಜತೆಗಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿರುವ ವೆಂಕಟರವಿ ಲಕ್ಷ್ಮೀ ಚೈತನ್ಯಾ (ಅರುಣಾ) ಅವರು ಮೃತ ನಕ್ಸಲ್ ಮುಖಂಡ ಚಲಪತಿ ಅವರ ಪತ್ನಿ. 2003ರಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ನಡೆದಿದ್ದ ದಾಳಿಯಲ್ಲಿ ಚಲಪತಿ ಪ್ರಮುಖ ಸೂತ್ರಧಾರಿ ಎಂದು ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಬುಧವಾರ ನಡೆದ ಪೊಲೀಸ್‌ ಕಾರ್ಯಾಚರಣೆಯಲ್ಲಿ ನಕ್ಸಲ್‌ ಮುಖಂಡರಾದ ಚೈತನ್ಯಾ (ಅರುಣಾ), ಗಾಜರ್ಲ ರವಿ (ಉದಯ್‌) ಮತ್ತು ಅಂಜು ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT