ADVERTISEMENT

ಆರೋಪ ಸಾಬೀತಾದರೆ ನೇಣಿಗೆ ಶರಣು: ಅಭಿಷೇಕ್‌ ಬ್ಯಾನರ್ಜಿ ಸವಾಲು

ಪಿಟಿಐ
Published 24 ಜನವರಿ 2021, 14:54 IST
Last Updated 24 ಜನವರಿ 2021, 14:54 IST
ಅಭಿಷೇಕ್‌ ಬ್ಯಾನರ್ಜಿ
ಅಭಿಷೇಕ್‌ ಬ್ಯಾನರ್ಜಿ   

ಕುಲ್ತಾಲಿ(ಪಶ್ಚಿಮ ಬಂಗಾಳ): ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ ಮಾತ್ರವೇ ರಾಜಕೀಯದಲ್ಲಿ ಅವಕಾಶ ಎಂಬ ಕಾನೂನನ್ನು ಕೇಂದ್ರ ಜಾರಿಗೊಳಿಸಿದರೆ ಖಂಡಿತವಾಗಿಯೂ ರಾಜಕೀಯ ತೊರೆಯುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಭಾನುವಾರ ತಿಳಿಸಿದ್ದಾರೆ.

ಬಿಜೆಪಿಯಲ್ಲಿನ ತಮ್ಮ ವಿರೋಧಿಗಳಿಗೆ ನೇರವಾಗಿ ಸವಾಲು ಹಾಕಿರುವ ತೃಣಮೂಲ ಕಾಂಗ್ರೆಸ್‌ ಮುಖಂಡ ಅಭಿಷೇಕ್‌, ‘ನನ್ನ ಮೇಲಿರುವ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಿದರೆ, ಸಾರ್ವಜನಿಕವಾಗಿ ನೇಣಿಗೆ ಶರಣಾಗುತ್ತೇನೆ’ ಎಂದು ಹೇಳಿದ್ದಾರೆ.

ಕುಲ್ತಲಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಸಕ್ರಿಯ ರಾಜಕೀಯದಿಂದ ನಿಷೇಧಿಸುವ ಮಸೂದೆಯನ್ನು ‍ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಬೇಕು. ಹೀಗಾದರೆ, ಮರು ಕ್ಷಣದಿಂದಲೇ ಬ್ಯಾನರ್ಜಿ ರಾಜಕೀಯ ರಂಗದಲ್ಲಿ ಇರುವುದಿಲ್ಲ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.