ಮುಂಬೈ: ಮಹಾರಾಷ್ಟ್ರದಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರು ಅವರ ಊರುಗಳಿಗೆ ಮರಳುತ್ತಿದ್ದು, ವಲಸೆ ಕಾರ್ಮಿಕರು ಎಲ್ಲಿಯೂ ಹೋಗಬೇಡಿ ಇದ್ದಲ್ಲೇ ಇರಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಲಾಕ್‍ಡೌನ್ ಆಗಿದ್ದರೂ ಜನರು ಆತಂಕಗೊಂಡಿದ್ದಾರೆ. ಜಿಲ್ಲೆಯ ಗಡಿ ಮುಚ್ಚಲಾಗಿದೆ. ರಾಜ್ಯದ ಗಡಿ ಮುಚ್ಚಲಾಗಿದೆ. ಆದರೂ ಜನರು ಊರಿಗೆ ತೆರಳುತ್ತಿದ್ದಾರೆ.ನೀವು ಚಿಂತೆ ಮಾಡಬೇಡಿ. ಮನೆಯೊಳಗೇ ಇರಿ.ನೀವು ಈಗಾಗಲೇ ಹೊರಟಿದ್ದರೆ, ನೀವೆಲ್ಲಿದ್ದೀರೋ ಅಲ್ಲಿಯೇ ಇರಿ. ಸರ್ಕಾರ ನಿಮಗೆ ಊಟ ಮತ್ತು ಸೂರು ನೀಡಲಿದೆ ಎಂದು ಉದ್ಧವ್ ಭರವಸೆ ನೀಡಿದ್ದಾರೆ.
ಅದೇ ವೇಳೆ ಬೇರೆ ರಾಜ್ಯಗಳಲ್ಲಿರುವ ಮಹಾರಾಷ್ಟ್ರದ ಜನರು ಕೂಡಾ ಅಲ್ಲೇ ಇರುವಂತೆ ಉದ್ಧವ್ ಹೇಳಿದ್ದಾರೆ. ನಿಮಗೆ ಏನಾದರೂ ಸಮಸ್ಯೆ ಇದ್ದರೆ ಕಚೇರಿಗೆ ಕರೆ ಮಾಡಿ, ನಾವು ಪರಿಹರಿಸುತ್ತೇವೆ. ಇದು ಪರೀಕ್ಷೆಯ ಸಮಯ. ಇದೂ ಕಳೆದು ಹೋಗುವುದು ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.