ADVERTISEMENT

ಜಾರ್ಖಂಡ್‌: 35 ವರ್ಷದ ಮಹಿಳೆಯ ಮೇಲೆ 17 ಜನರಿಂದ ಸಾಮೂಹಿಕ ಅತ್ಯಾಚಾರ

ಏಜೆನ್ಸೀಸ್
Published 10 ಡಿಸೆಂಬರ್ 2020, 12:49 IST
Last Updated 10 ಡಿಸೆಂಬರ್ 2020, 12:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದುಮ್ಕಾ: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ 17 ಜನರು ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ನಡೆದಿದೆ.

ಮಹಿಳೆ ಮತ್ತು ಅವರ ಪತಿ ಮಾರುಕಟ್ಟೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಂಪತಿಗಳು ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಐವರು ಆರೋಪಿಗಳು ಪತಿಗೆ ಚಾಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಆ ನಂತರ ಇತರರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯು ಐದು ಮಕ್ಕಳ ತಾಯಿಯಾಗಿದ್ದು, ದುಮ್ಕಾ ಜಿಲ್ಲೆಯ ಕಥಿಕುಂಡ್ ನಿವಾಸಿಯಾಗಿದ್ದಾರೆ.

ADVERTISEMENT

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗಾಗಲೇ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ಸುದರ್ಶನ್ ಮಂಡಲ್ ತಿಳಿಸಿದ್ದಾರೆ.

'ಸಂತ್ರಸ್ತೆಯು ಈಗಾಗಲೇ ಒಬ್ಬ ವ್ಯಕ್ತಿಯನ್ನು ಗುರುತಿಸಿದ್ದಾರೆ. ವೈದ್ಯಕೀಯ ತಪಾಸಣೆಗಾಗಿ ಆಕೆಯನ್ನು ದುಮ್ಕಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಎಸ್ಪಿ ಅಂಬರ್ ಲಕ್ರಾ ಹೇಳಿದ್ದಾರೆ.

ಈ ಮಧ್ಯೆ, ದುಮ್ಕಾ ಜಿಲ್ಲೆಯಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ಜಾರ್ಖಂಡ್ ಸರ್ಕಾರದಿಂದ ವರದಿ ಕೇಳಿದೆ.

ದುಮ್ಕಾ ಜಾರ್ಖಂಡ್‌ನ ಎರಡನೇ ರಾಜಧಾನಿಯಾಗಿದ್ದು, ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಮತ್ತು ಅವರ ಪುತ್ರ ಸಿಎಂ ಹೇಮಂತ್ ಸೊರೆನ್ ಅವರ ತವರೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.