
ಪಿಟಿಐ
ಎಐ ಚಿತ್ರ
ಮಲಪ್ಪುರಂ(ಕೇರಳ): 50 ವರ್ಷದ ಮಹಿಳೆಯೊಬ್ಬರು ತಮ್ಮ ಮೇಲೆ ದಾಳಿ ಮಾಡಿದ ಚಿರತೆ ವಿರುದ್ಧ ತೆಂಗಿನ ಗರಿ ಬಳಸಿ ಹೋರಾಡಿ ಜೀವ ಉಳಿಸಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೂಕ್ಕೊಟ್ಟುಂಪಾದಂನಲ್ಲಿ ನಡೆದಿದೆ.
ಮನೆಯ ಮುಂದೆ ಕುಳಿತಿದ್ದಾಗ ಹಿಂಬದಿ ಘರ್ಜನೆಯ ಶಬ್ಧ ಕೇಳಿಸಿತು. ತಿರುಗುತ್ತಿದ್ದಂತೆ ಚಿರತೆ ದಾಳಿ ನಡೆಸಿತು ಎಂದು 50 ವರ್ಷದ ಜಾನಕಿ ಎಂಬ ಮಹಿಳೆ ಹೇಳಿದ್ದಾರೆ.
ಚಿರತೆಯು ಏಕಾಏಕಿ ನನ್ನ ಮೇಲೆ ಎರಗಿತು. ಈ ಸಂದರ್ಭ ಸಮೀಪದಲ್ಲೇ ಬಿದ್ದಿದ್ದ ತೆಂಗಿನ ಗರಿ ಹಿಡಿದು ಹೋರಾಡಿದೆ ಎಂದಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ತಲೆ, ಬೆನ್ನು ಮತ್ತು ಎರಡೂ ಭುಜಗಳಿಗೆ ಗಾಯಗಳಾಗಿವೆ.
ಚಿರತೆ ದಾಳಿ ಮಾಡಿದೆ ಎಂದು ಮಹಿಳೆ ಹೇಳುತ್ತಿದ್ದಾರೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.