ADVERTISEMENT

ನಿರ್ಭಯಾ ಹತ್ಯೆ ನೆನಪಿಸುವ ಮತ್ತೊಂದು ಸಾಮೂಹಿಕ ಅತ್ಯಾಚಾರ: ಪೊಲೀಸರಿಗೆ ನೋಟಿಸ್‌

ಪಿಟಿಐ
Published 19 ಅಕ್ಟೋಬರ್ 2022, 7:36 IST
Last Updated 19 ಅಕ್ಟೋಬರ್ 2022, 7:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೆಹಲಿ: ಮೂರು ದಿನಗಳ ಹಿಂದೆ ನಡೆದಿದ್ದ ಮಹಿಳೆ(38) ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ನಿರ್ಭಯಾ ಹತ್ಯೆಯನ್ನು ನೆನಪಿಸುತ್ತಿದೆ ಎಂದು ದೆಹಲಿ ಮಹಿಳಾ ಆಯೋಗ ಹೇಳಿದ್ದು, ಈ ಸಂಬಂಧ ಗಾಜಿಯಾಬಾದ್‌ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದೆ.

ಗಾಜಿಯಾಬಾದ್‌ ಎಸ್‌ಪಿಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಜರುಗಿಸಿದ ವರದಿ ಮತ್ತು ಎಫ್‌ಐಆರ್‌ ಪ್ರತಿಯೊಂದಿಗೆ ಇನ್ನಿತರ ದಾಖಲೆ ಒದಗಿಸುವಂತೆ ಆಯೋಗ ಕೇಳಿದೆ.

ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ‘ಘಟನೆ ಅತ್ಯಂತ ಭಯಾನಕ ಮತ್ತು ಮನ ಕದಡುತ್ತಿದೆ. ಇದು ನಿರ್ಭಯಾ ಪ್ರಕರಣ ನೆನಪಿಸುತ್ತಿದೆ. ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಕಠಿಣ ಕ್ರಮ ಜರುಗಿಸಬೇಕು. ಇಲ್ಲಿ ಮಹಿಳೆಯರು ಮತ್ತು ಮಕ್ಕಳು ಎಷ್ಟು ಕ್ರೌರ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲನಾಗಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ದೆಹಲಿ ನಿವಾಸಿ ಮಹಿಳೆಯನ್ನು ಅತ್ಯಾಚಾರವೆಸಗಿ ಬ್ಯಾಗ್‌ನಲ್ಲಿ ಸುತ್ತಿ ಬಿಸಾಡಲಾಗಿತ್ತು. ಆಕೆಯ ಕೈ ಕಾಲುಗಳನ್ನು ಕಟ್ಟಿ ಹಾಕಲಾಗಿದ್ದು, ಗುಪ್ತಾಂಗದ ಒಳಗೆ ಕಬ್ಬಿಣದ ರಾಡ್‌ ತೂರಿಸಲಾಗಿತ್ತು ಎಂದು ಆಯೋಗ ಹೇಳಿದೆ.

ಅ.16ರಂದು ಮಹಿಳೆ ತನ್ನ ಸಹೋದರನ ಹುಟ್ಟಹಬ್ಬಕ್ಕೆ ಹೋಗಲು ಆಟೋಗಾಗಿ ಕಾಯುತ್ತಿದ್ದರು. ಎಸ್‌ಯುವಿಯಲ್ಲಿ ಬಂದ ನಾಲ್ವರು ಅಪಹರಣ ಮಾಡಿದ್ದಾರೆ. ಅವರೊಂದಿಗೆ ಇನ್ನೊಬ್ಬ ಸೇರಿಕೊಂಡು 2 ದಿನಗಳ ಕಾಲ ಅತ್ಯಾಚಾರ ನಡೆಸಲಾಗಿದೆ. ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.