ADVERTISEMENT

ಜಮ್ಮು | ಶೆಲ್‌ ಸ್ಫೋಟ: ಮಹಿಳೆ ಸಾವು

ಪಿಟಿಐ
Published 5 ಜೂನ್ 2024, 13:59 IST
Last Updated 5 ಜೂನ್ 2024, 13:59 IST
..
..   

ಜಮ್ಮು : ಸಾಂಬ ಜಿಲ್ಲೆಯ ಪುರಮಂಡಲ ಪ್ರದೇಶದಲ್ಲಿ ನಡೆದಿದ್ದ ಶೆಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಬುಧವಾರ ಸಾವಿಗೀಡಾಗಿದ್ದಾರೆ.

ಮೇ 27ರಂದು ನಡೆದಿದ್ದ ಅವಘಡದಲ್ಲಿ ಮೂವರು ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಸೆಮ್ರೂ ದೇವಿ ಎಂಬುವವರು ಬುಧವಾರ ಮೃತಪಟ್ಟಿದ್ದಾರೆ. ರಮೀತ್‌ ಸಿಂಗ್‌(66) ಮತ್ತು ಸುರಿಯ ಬಿಬಿ(58) ಎಂಬುವವರ ಆರೋಗ್ಯ ಸ್ಥಿರವಾಗಿದೆ.

‘ಸೆಮ್ರೂ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿತ್ತು. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವವಾರ ಮುಂಜಾನೆ ನಿಧನರಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.