ADVERTISEMENT

ವಿಕಸಿತ ಭಾರತಕ್ಕೆ ಮಹಿಳೆಯರ ಪಾತ್ರ ಮುಖ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು

ಹೇಳಿಕೆ

ಪಿಟಿಐ
Published 2 ನವೆಂಬರ್ 2025, 12:48 IST
Last Updated 2 ನವೆಂಬರ್ 2025, 12:48 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ಹರಿದ್ವಾರ: ಭಾರತವು 2047ರ ವೇಳೆ ಅಭಿವೃದ್ಧಿ ಹೊಂದಿದ ದೇಶವಾಗಲು ಮಹಿಳೆಯರು ಸೇರಿದಂತೆ ಎಲ್ಲರ ಸಾಮೂಹಿಕ ಸಹಕಾರದ ಅಗತ್ಯವಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. 

ಭಾನುವಾರ ನಡೆದ ಪತಂಜಲಿ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುರ್ಮು ಅವರು ಭಾಗಿಯಾಗಿದ್ದರು. ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಮಹತ್ತರ ಪಾತ್ರದ ಕುರಿತು ಮಾತನಾಡಿದರು.  

ಪತಂಜಲಿ ವಿಶ್ವವಿದ್ಯಾಲಯದಲ್ಲಿ ಶೇಕಡ 62ರಷ್ಟು ವಿದ್ಯಾರ್ಥಿಗಳು ಹಾಗೂ ಘಟಿಕೋತ್ಸವದಲ್ಲಿ ಶೇ 64ರಷ್ಟು ವಿದ್ಯಾರ್ಥಿಗಳು ಮಹಿಳೆಯರೇ ಆಗಿದ್ದಾರೆ ಎಂಬುದನ್ನು ಗುರುತಿಸಿ ಸಂತಸ ವ್ಯಕ್ತಪಡಿಸಿದರು. ಪುರುಷರ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಪದಕ ಸ್ವೀಕರಿಸಿದರು. 

ADVERTISEMENT

ಈ ಬಗ್ಗೆ ಮಾತನಾಡಿದ ಮುರ್ಮು ‘ಇದು ಕೇವಲ ಅಂಕಿಅಂಶವಲ್ಲ. ಮಹಿಳೆಯರ ನಾಯಕತ್ವದಲ್ಲಿ ಭಾರತದ ಪ್ರಗತಿಯನ್ನು ಸೂಚಿಸುತ್ತದೆ. ಪ್ರಾಚೀನ ಭಾರತದಲ್ಲಿ ಗಾರ್ಗಿ, ಮೈತ್ರೇಯಿ, ಅಪಾಲಾ, ಲೋಪಮುದ್ರ ಅವರು ಬೌದ್ಧಿಕ ಪ್ರಗತಿಯನ್ನು ಸಾಧಿಸಿದ್ದನ್ನು ಮುಂದುವರಿಸುತ್ತಿದೆ. ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಶೇ 50ರಷ್ಟು ಇರುವ ಮಹಿಳೆಯರು, ದೇಶದ ಅಭಿವೃದ್ಧಿಯಲ್ಲಿ ಅವಿಭಾಜ್ಯ ಅಂಗವಾಗಿದ್ದಾರೆ’ ಎಂದು ಹೇಳಿದರು.  

ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಗಳಲ್ಲಿ ಪತಂಜಲಿ ವಿಶ್ವವಿದ್ಯಾಲಯದ ಕೊಡುಗೆಯನ್ನು ರಾಷ್ಟ್ರಪತಿಯವರು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.