ADVERTISEMENT

3ನೇ ದಿನವೂ ಅಯ್ಯಪ್ಪ ದರ್ಶನ ಇಲ್ಲ: ವ್ಯರ್ಥವಾದ ಕವಿತಾ, ಫಾತಿಮಾ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 6:20 IST
Last Updated 19 ಅಕ್ಟೋಬರ್ 2018, 6:20 IST
ಕವಿತಾ ಮತ್ತು ಫಾತಿಮಾ
ಕವಿತಾ ಮತ್ತು ಫಾತಿಮಾ   

ಪಂಪಾ:ಅಯ್ಯಪ್ಪಸ್ವಾಮಿಭಕ್ತರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ದೇವಾಲಯ ಪ್ರವೇಶಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ದೇವರ ದರ್ಶನ ಮಾಡದೇ ಪೊಲೀಸ್‌ ಭದ್ರತೆಯಲ್ಲಿ ವಾಪಾಸು ಮರಳಿದ್ದಾರೆ.

ಹೈದರಾಬಾದ್‌ ಮೂಲದ ಪತ್ರಕರ್ತೆ ಕವಿತಾ ಜಕ್ಕಲ ಹಾಗೂ ಮಹಿಳಾ ಹೋರಾಟಗಾರ್ತಿ ರೆಹನಾ ಫಾತಿಮಾ ಅಯ್ಯಪ್ಪ ಸ್ವಾಮಿ ದರ್ಶನಕ್ಕಾಗಿದೇವಾಲಯದ ಸನ್ನಿದಾನದವರೆಗೂ ತೆರಳಿದ್ದರು.

ಆದರೆ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮಹಿಳೆಯರ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಹಿರಿಯ ಪೊಲೀಸ್‌ ಅಧಿಕಾರಿಗಳು ಆ ಮಹಿಳೆಯರ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಕೆ ಮಾಡಿ ವಾಪಾಸು ಕಳುಹಿಸಲು ಮುಂದಾಗಿದ್ದಾರೆ.

ADVERTISEMENT

ದೇವಾಲಯದ ಹೊರ ಆವರಣ ಹಾಗೂ ಹದಿನೆಂಟು ಮೆಟ್ಟಿಲುಗಳಿರುವ ಸ್ಥಳದಲ್ಲಿ ಸಾವಿರಾರು ಜನ ಪ್ರತಿಭಟನಾಕಾರರು ನೆರೆದಿದ್ದರು. ಈ ವೇಳೆ ಧಾರ್ಮಿಕ ವಿಧಿವಿಧಾನಗಳನ್ನು ನಿಲ್ಲಿಸಿ ದೇವಾಲಯದ ಅರ್ಚಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲೂ ಮಕ್ಕಳು, ಹಿರಿಯ ಅರ್ಚಕರುಇದುದ್ದರಿಂದ ಪೊಲೀಸರು ಬಲಪ್ರಯೋಗಕ್ಕೆ ಮುಂದಾಗಲಿಲ್ಲ.ದರ್ಶನಕ್ಕೆ ಆಗಮಿಸಿದ್ದ ಮಹಿಳೆಯರ ಮನವೊಲಿಸಿ ಭದ್ರತೆಯಲ್ಲಿ ವಾಪಾಸು ಕಳುಹಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಂದು ವೇಳೆಮಹಿಳೆಯರು ದೇವಾಲಯ ಆವರಣ ಪ್ರವೇಶ ಮಾಡಿದ್ದೇ ಆದರೆ ದೇವಾಲಯದ ಬಾಗಿಲು ಮುಚ್ಚುವುದಾಗಿ ಪ್ರಧಾನ ಆರ್ಚಕರು ಬೆದರಿಕೆ ಹಾಕಿದ್ದರು.

ಸನ್ನಿದಾನದವರೆಗೂ ಆಗಮಿಸಿರುವ ಮಹಿಳೆಯರು ದೇವಾಲಯ ಪ್ರವೇಶ ಮಾಡುವುದಿಲ್ಲ ಎಂದು ಪೊಲೀಸರು ಖಚಿತಪಡಿಸಿದ ಬಳಿಕ ದೇವಾಲಯದ ಹಿರಿಯ ಅರ್ಚಕರು ಪ್ರತಿಭಟನೆ ನಿಲ್ಲಿಸಿದ್ದಾರೆ.

ಕೊಚ್ಚಿಯಲ್ಲಿ ಫಾತಿಮಾ ಮನೆಗೆ ಕಲ್ಲು: ಮಹಿಳಾ ಹೋರಾಟಗಾರ್ತಿ ರೆಹನಾ ಫಾತಿಮಾ ಅವರ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.