ADVERTISEMENT

ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸಂಖ್ಯೆಯ ಲೈಂಗಿಕ ಸಂಗಾತಿಗಳು!

11 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾದ ಅಂಕಿ–ಅಂಶಗಳ ಮಾಹಿತಿ

ಪಿಟಿಐ
Published 19 ಆಗಸ್ಟ್ 2022, 12:28 IST
Last Updated 19 ಆಗಸ್ಟ್ 2022, 12:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ ಎಂಬ ಅಂಶ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಆದರೆ, ತಮ್ಮ ಪತ್ನಿಯಲ್ಲದ ಅಥವಾ ಸಹಬಾಳ್ವೆ ನಡೆಸದಿರುವ ಇತರ ವ್ಯಕ್ತಿಯೊಂದಿಗೆ ಸಂಭೋಗ ನಡೆಸಿರುವ ಪುರುಷರ ಸಂಖ್ಯೆ ಶೇ 4ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ 0.5ರಷ್ಟಿತ್ತು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌) ಅಂಕಿ–ಅಂಶಗಳು ಹೇಳುತ್ತವೆ.

1.1 ಲಕ್ಷ ಮಹಿಳೆಯರು ಹಾಗೂ ಲಕ್ಷ ಪುರುಷರು ಈ ಸಮೀಕ್ಷೆಯ ಭಾಗವಾಗಿದ್ದರು. ರಾಜಸ್ಥಾನ, ಹರಿಯಾಣ, ಚಂಡೀಗಡ, ಜಮ್ಮು–ಕಾಶ್ಮೀರ, ಲಡಾಖ್‌, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ಈ ವಿದ್ಯಮಾನ ದಾಖಲಾಗಿದೆ.

ರಾಜಸ್ಥಾನದಲ್ಲಿ ಮಹಿಳೆಯರು ಗರಿಷ್ಠ 3.1 ಲೈಂಗಿಕ ಸಂಗಾತಿಗಳನ್ನು ಹೊಂದಿದ್ದಾರೆ. ಪುರುಷರು ಹೊಂದಿರುವ ಲೈಂಗಿಕ ಸಂಗಾತಿಗಳ ಸಂಖ್ಯೆ 1.8 ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಈ ಸಮೀಕ್ಷೆಯನ್ನು 2019–21ರ ಅವಧಿಯಲ್ಲಿ ನಡೆಸಲಾಗಿದ್ದು, 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ.

ನೀತಿ ನಿರೂಪಣೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗಬಲ್ಲ ಸಾಮಾಜಿಕ–ಆರ್ಥಿಕ ಹಾಗೂ ಇತರ ಅಂಶಗಳನ್ನು ಸಹ ಈ ಸಮೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.