
ಪಿಟಿಐ
ರಾಷ್ಟ್ರೀಯ ಮಹಿಳಾ ಆಯೋಗ
ನವದೆಹಲಿ: ಮಹಿಳೆಯರ ವಿರುದ್ಧದ ಹಿಂಸಾಚಾರ, ದೌರ್ಜ್ಯನ್ಯ ಮತ್ತು ಯಾವುದೇ ರೀತಿಯ ಅವಮಾನಗಳಾದಾಗ ತುರ್ತು ನೆರವು ನೀಡುವ ಹೊಸ ಸಹಾಯವಾಣಿಗೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ಸೋಮವಾರ ಚಾಲನೆ ನೀಡಿದೆ.
ಹೊಸ 24X7 ಸಹಾಯವಾಣಿಯ ಸಂಖ್ಯೆ 14490ಕ್ಕೆ ಉಚಿತವಾಗಿ ಕರೆ ಮಾಡಬಹುದು ಮತ್ತು ಈ ಸಂಖ್ಯೆಯನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು ಎಂದು ಎನ್‌ಸಿಡಬ್ಲ್ಯು ತಿಳಿಸಿದೆ.
ಸಹಾಯವಾಣಿಯನ್ನು ಸಂಪರ್ಕಿಸುವವರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲಾಗುತ್ತದೆ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತದೆ ಮತ್ತು ತುರ್ತು ನೆರವು ನೀಡಲಾಗುತ್ತದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.