ADVERTISEMENT

ಐಎನ್‌ಎಸ್‌ ವಿಕ್ರಾಂತ್‌ನಿಂದ ಹಾರ್ಡ್‌ ಡಿಸ್ಕ್‌ ಕಳವು: ಇಬ್ಬರು ಕಾರ್ಮಿಕರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 12:42 IST
Last Updated 10 ಜೂನ್ 2020, 12:42 IST
ಐಎನ್‌ಎಸ್‌ ವಿಕ್ರಾಂತ್‌ 
ಐಎನ್‌ಎಸ್‌ ವಿಕ್ರಾಂತ್‌    

ತಿರುವನಂತಪುರ: ಯುದ್ಧವಿಮಾನಗಳನ್ನು ಹೊತ್ತು ಸಾಗಬಲ್ಲ(ಏರ್‌ಕ್ರಾಫ್ಟ್‌ ಕ್ಯಾರಿಯರ್‌) ಐಎನ್‌ಎಸ್‌ ವಿಕ್ರಾಂತ್ ಹಡಗಿನಲ್ಲಿದ್ದ ಕಂಪ್ಯೂಟರ್‌ಗಳಿಂದ ಹಾರ್ಡ್‌ಡಿಸ್ಕ್‌ ಹಾಗೂ ರ್‍ಯಾಮ್‌ಗಳ ಕಳವಿಗೆ ಸಂಬಂಧಿಸಿದಂತೆ ಇಬ್ಬರು ವಲಸೆ ಕಾರ್ಮಿಕರನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಶಕ್ಕೆ ಪಡೆದಿದೆ.

ಕೊಚ್ಚಿ‌ ಶಿಪ್‌ಯಾರ್ಡ್‌ನಲ್ಲಿಐಎನ್‌ಎಸ್‌ ವಿಕ್ರಾಂತ್‌ ನಿರ್ಮಾಣದ ಅಂತಿಮ ಹಂತದಲ್ಲಿದೆ. ಹಡಗಿನ ವಿನ್ಯಾಸ ಹಾಗೂ ತಾಂತ್ರಿಕ ಮಾಹಿತಿಗಳಿದ್ದ ನಾಲ್ಕು ಹಾರ್ಡ್‌ಡಿಸ್ಕ್‌ ಕಳವಾಗಿರುವುದು ಕಳೆದ ಸೆಪ್ಟೆಂಬರ್‌ 13ಕ್ಕೆ ಬೆಳಕಿಗೆ ಬಂದಿತ್ತು. ಬಂಧಿತರಲ್ಲಿ ಒಬ್ಬ ಬಿಹಾರ ಹಾಗೂ ಮತ್ತೊಬ್ಬ ರಾಜಸ್ಥಾನ ಮೂಲದವನಾಗಿದ್ದಾನೆ. ಇವರಿಬ್ಬರೂ ಹಡಗಿಗೆ ಬಣ್ಣ ಬಳಿಯುವ ತಂಡದಲ್ಲಿ ಇದ್ದರು. ಕಳ್ಳತನ ನಡೆದ ಜಾಗದಲ್ಲಿ ದೊರೆತ ಬೆರಳಚ್ಚು ಹಾಗೂ ನೂರಾರು ಕಾರ್ಮಿಕರ ಬೆರಳಚ್ಚುಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಭಾರತದ ಪ್ರಥಮ ಸ್ವದೇಶಿ ಏರ್‌ಕ್ರಾಫ್ಟ್‌ ಕ್ಯಾರಿಯರ್‌ ಇದಾಗಿದ್ದು, ಹಾರ್ಡ್‌ಡಿಸ್ಕ್‌ ಕಳ್ಳತನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಎನ್‌ಐಎ ಈ ತನಿಖೆ ಕೈಗೆತ್ತಿಕೊಂಡಿತ್ತು. ಈ ಹಾರ್ಡ್‌ಡಿಸ್ಕ್‌ಗಳಲ್ಲಿ ನೌಕಾಪಡೆಗೆ ಸಂಬಂಧಿಸಿದಂಥ ಯಾವುದೇ ಸೂಕ್ಷ್ಮವಾದ ಮಾಹಿತಿಗಳು ಇರಲಿಲ್ಲ ಎಂದು ಶಿಪ್‌ಯಾರ್ಡ್‌ ಅಧಿಕಾರಿಗಳು ತಿಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.