ADVERTISEMENT

ಮಣಿಪುರ: ಕಾಮಗಾರಿ ವೇಳೆ ಎರಡನೇ ಮಹಾಯುದ್ಧದ ಅವಶೇಷಗಳು ಪತ್ತೆ

ಪಿಟಿಐ
Published 22 ಜುಲೈ 2025, 7:37 IST
Last Updated 22 ಜುಲೈ 2025, 7:37 IST
   

ಇಂಫಾಲ್: ಕಾಮಗಾರಿಯ ವೇಳೆ ಕಾರ್ಮಿಕರಿಗೆ ಕೆಲವು ಅವಶೇಷಗಳು ಪತ್ತೆಯಾಗಿದ್ದು, ಇವು ಎರಡನೇ ಮಹಾಯುದ್ಧದ ವೇಳೆಯದ್ದಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಕಾಮಗಾರಿಗಾಗಿ ನೆಲವನ್ನು ಅಗೆಯುತ್ತಿರುವಾಗ ನಾಲ್ಕು ಅಡಿಗಳ ಆಳದಲ್ಲಿ ಅವಶೇಷಗಳು ಪತ್ತೆಯಾಗಿವೆ.

ಕಾಮಗಾರಿಯ ಸ್ಥಳದಲ್ಲಿ ದೊಡ್ಡ ಪ್ರಮಾಣದ ತುಕ್ಕು ಹಿಡಿದ ಖಾಲಿ ಡಬ್ಬಗಳು, ಟಿನ್‌ ಕ್ಯಾನ್‌, ನೀರಿನ ಬಾಟಲಿಗಳು, ಗ್ರೆನೇಡ್ ಮತ್ತು ಶೆಲ್‌ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ADVERTISEMENT

ಕಾಮಗಾರಿಯಲ್ಲಿ ಸಿಕ್ಕಿರುವ ಅವಶೇಷಗಳು ಎರಡನೇ ಮಹಾಯುದ್ಧದ ಸಮಯದಲ್ಲಿ 1944ರ ವೇಳೆಗೆ ನಡೆದ ಇಂಫಾಲ್‌ ಯುದ್ದದಲ್ಲಿ ಮಿತ್ರ ಪಡೆಗಳ ಸೈನಿಕರ ವಸ್ತುಗಳಾಗಿರಬಹುದು. ಕಾಂಚಿಪುರ ಬೆಟ್ಟಗಳ ಸಾಲಿನಲ್ಲಿ ಮಿತ್ರ ಪಡೆಗಳ ಸೈನಿಕ ಶಿಬಿರಗಳಿದ್ದವು ಎಂದು ತಿಳಿಸಿದ್ದಾರೆ.

ಇಂಫಾಲ್‌ ಯುದ್ಧ ಹಾಗೂ ಕೋಹಿಮಾ ಯುದ್ದದ ಸಮಯದಲ್ಲಿ ಜಪಾನ್‌, ಅಜಾದ್‌ ಹಿಂದ್‌ ಫೌಜ್‌ ಹಾಗೂ ಮಿತ್ರಪಡೆಗಳು ಭಾಗಿಯಾಗಿದ್ದವು. ಇಂಫಾಲ್‌ ಯುದ್ಧದಲ್ಲಿ ಸುಮಾರು 54 ಸಾವಿರ ಜಪಾನ್‌ನ ಸೈನಿಕರು ಮೃತಪಟ್ಟಿದ್ದರು. ಮಿತ್ರ‍ಪಡೆಗಳ 12 ಸಾವಿರ ಸೈನಿಕರು ಮೃತಪಟ್ಟಿದ್ದರು. ಜಪಾನ್‌ ಸೇನೆಯು ಇಂಫಾಲ್‌ನ ಕಣಿವೆಗಳನ್ನು ಸುತ್ತುವರೆದ್ದರೂ, ಅದು ಬ್ರಿಟೀಷ್ ಇಂಡಿಯಾ ತಲುಪದಂತೆ ಮಿತ್ರಪಡೆ ತಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.