ADVERTISEMENT

ತಪ್ಪು ಮಾಹಿತಿ: ₹15,000 ಪರಿಹಾರ ನೀಡಲು ಪ್ರಯೋಗಾಲಯಕ್ಕೆ ಸೂಚನೆ

ಪಿಟಿಐ
Published 29 ಸೆಪ್ಟೆಂಬರ್ 2022, 12:37 IST
Last Updated 29 ಸೆಪ್ಟೆಂಬರ್ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಠಾಣೆ, ಮಹಾರಾಷ್ಟ್ರ: ಪ್ರಯೋಗಾಲಯವೊಂದು ಕೋವಿಡ್‌–19 ಪರೀಕ್ಷಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನಮೂದಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರ ವಿಮಾನ ಪ್ರಯಾಣ ರದ್ದಾಗಿತ್ತು. ಆ ವ್ಯಕ್ತಿಗೆ ₹ 15,000 ಪರಿಹಾರ ನೀಡುವಂತೆ ಪ್ರಯೋಗಾಲಯಕ್ಕೆ ಠಾಣೆ ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗ(ಟಿಡಿಸಿಸಿಆರ್‌ಸಿ) ನಿರ್ದೇಶಿಸಿದೆ.

ವ್ಯಕ್ತಿ ಕುಟುಂಬದ ಜೊತೆ 2020ರ ಡಿಸೆಂಬರ್‌ 2ರಂದು ದುಬೈಗೆ ಹೊರಟಿದ್ದರು. ಆ ಸಮಯದ ಕೋವಿಡ್‌ ನಿಯಮದ ಪ್ರಕಾರ ಪ್ರಯಾಣದ 72 ಗಂಟೆಗಳ ಒಳಗೆ ಮಾಡಿಸಲಾಗಿರುವ ಕೋವಿಡ್‌–19 ಪರೀಕ್ಷೆಯ ಪ್ರಮಾಣಪತ್ರವನ್ನು ವಿಮಾನ ನಿಲ್ದಾಣದಲ್ಲಿ ಒದಗಿಸಬೇಕಿತ್ತು. ವ್ಯಕ್ತಿಯ ಪತ್ನಿ ಮತ್ತು ಮಗುವಿನ ಕೋವಿಡ್‌ ಪ್ರಮಾಣಪತ್ರದಲ್ಲಿ ಪರೀಕ್ಷಾ ದಿನಾಂಕವನ್ನು ನವೆಂಬರ್‌ 29 ಎಂದು ಮತ್ತು ವ್ಯಕ್ತಿಯ ಪ್ರಮಾಣಪತ್ರದಲ್ಲಿ ಪರೀಕ್ಷಾ ದಿನಾಂಕವನ್ನು ನವೆಂಬರ್‌ 28 ಎಂದು ನಮೂದಿಸಲಾಗಿತ್ತು. ಈತಪ್ಪಿನಿಂದಾಗಿ ವ್ಯಕ್ತಿಯ ಪ್ರಯಾಣ ರದ್ದಾಗಿತ್ತು. ತಮಗೆ ಪರಿಹಾರ ದೊರಕಿಸಬೇಕೆಂದು ಕೋರಿ ಅವರುಟಿಡಿಸಿಸಿಆರ್‌ಸಿನಲ್ಲಿ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT