
ನವದೆಹಲಿ: ‘ಗ್ರೋಕ್’ನ ಮೂಲಕ ವ್ಯಕ್ತಿಗಳ ಅಶ್ಲೀಲ ಮತ್ತು ಬೆತ್ತಲಾಗಿಸುವ ಚಿತ್ರಗಳ ರಚಿಸುವುದನ್ನು ತಡೆಯಲು ‘ಎಕ್ಸ್’ ತಾಂತ್ರಿಕ ಕ್ರಮಗಳನ್ನು ಜಾರಿಗೆ ತಂದಿದೆ.
ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಆ್ಯಪ್ ‘ಗ್ರೋಕ್’ನಿಂದ ಸೃಷ್ಟಿಯಾಗುತ್ತಿದ್ದ ಅಶ್ಲೀಲ ಡೀಪ್‌ಫೇಕ್ ವಿಡಿಯೊಗಳ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ ‘ಎಕ್ಸ್’ ಈ ಕ್ರಮ ಕೈಗೊಂಡಿದೆ.
‘ಪಾವತಿಸಿದ ಚಂದದಾರರು ಸೇರಿದಂತೆ ಎಲ್ಲಾ ಬಳಕೆದಾರರಿಗೂ ಈ ನಿರ್ಬಂಧ ಅನ್ವಯಿಸುತ್ತದೆ’ ಎಂದು ‘ಎಕ್ಸ್’ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.
‘ಗ್ರೋಕ್’ ಖಾತೆಯ ಮೂಲಕ ಚಿತ್ರಗಳನ್ನು ರಚಿಸುವುದು ಮತ್ತು ಸಂಕಲನ ಮಾಡುವ ಅವಕಾಶವು ‘ಎಕ್ಸ್’ನಲ್ಲಿ ಈಗ ಪಾವತಿಸಿದ ಚಂದಾದಾರರಿಗೆ ಮಾತ್ರ ಲಭ್ಯವಿದೆ ಎಂದು ತಿಳಿಸಿದೆ.
‘ಕಾನೂನುಬಾಹಿರವಾಗಿ ‘ಗ್ರೋಕ್’ ಮೂಲಕ ಬಿಕಿನಿ, ಒಳ ಉಡುಪಿನಲ್ಲಿ ವ್ಯಕ್ತಿಯ ಚಿತ್ರಗಳನ್ನು ರಚಿಸುವ ಎಲ್ಲಾ ಬಳಕೆದಾರರನ್ನು ಬ್ಲಾಕ್ ಮಾಡುತ್ತೇವೆ’ ಎಂದು ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.