ನವದೆಹಲಿ: ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕಡೆಗೆ ನಮ್ಮ ಸರ್ಕಾರವು ಹೆಜ್ಜೆಯಿಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದರು.
ಗುರುವಾರ ಯಮುನಾ ನದಿಯ ಪುನರುಜ್ಜೀವನದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಮಾತುಕತೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಯಮುನಾ ನದಿಯ ಮೂಲ ಸ್ಥಾನದಿಂದ ಸಮುದ್ರ ಸೇರುವವರೆಗೆ ಮಾಲಿನ್ಯ ಮುಕ್ತವಾಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿ ಯೋಜನೆಯಾಗಿದೆ ಎಂದರು.
ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರವು ಸಹಯೋಗದಲ್ಲಿ ದೆಹಲಿ ಸಮೀಪ ಯಮುನಾ ನದಿಯನ್ನು ಮಾಲಿನ್ಯ ಮುಕ್ತವಾಗಿಸುವ ಕೆಲಸ ಮಾಡುತ್ತಿದ್ದು, ಹಂತ ಹಂತವಾಗಿ ನದಿಯನ್ನು ಸ್ವಚ್ಛ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೆಹಲಿಯ ವಜೀರಾಬಾದ್ ಮತ್ತು ಓಖ್ಲಾ ನಡುವಿನ 22 ಕಿ.ಮೀ ಪ್ರದೇಶದಲ್ಲಿ ಯಮುನಾ ನದಿಗೆ ಅದರ ಒಟ್ಟು ಮಾಲಿನ್ಯದ ಶೇ.80ರಷ್ಟು ಸೇರ್ಪಡೆಯಾಗುತ್ತಿದ್ದು, ಈ ವಿಸ್ತೀರ್ಣವು ಕೇವಲ ನದಿಯ ಶೇ.2ರಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.