ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು 'ಕಲಿಯುಗದ ಅವತಾರ', 'ಯೋಗಿ ಆದಿತ್ಯನಾಥ ಮುಂದಿನ ಪ್ರಧಾನಿ' ಎಂದು ಬರೆದ ಹೋರ್ಡಿಂಗ್‍ನ್ನು ತೆರವುಗೊಳಿಸಲಾಗಿದೆ.
ಆಗ್ರಾದ ಹಲವಾರು ಸ್ಥಳಗಳಲ್ಲಿ ಈ ರೀತಿಯ ಹೋರ್ಡಿಂಗ್ ಕಾಣಿಸಿಕೊಂಡಿತ್ತು.ಈ ಬಗ್ಗೆ ಮುನ್ಸಿಪಲ್ ಕಾರ್ಪೊರೇಷನ್ ಎಚ್ಚರಿಕೆ ನೀಡಿದ ನಂತರ ಹೋರ್ಡಿಂಗ್ ತೆಗೆಯಲಾಗಿದೆ.
ಶ್ರೀರಾಮ ಮತ್ತು ಆದಿತ್ಯನಾಥರ ಫೋಟೋ ಇರುವ ಹೋರ್ಡಿಂಗ್‍ನಲ್ಲಿ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಧನ್ಯವಾದ ಎಂದು ಬರೆದಿತ್ತು.ಇನ್ನೊಂದುಕಡೆ ಉತ್ತರ ಪ್ರದೇಶದ ನವ ನಿರ್ಮಾಣ್ ಸೇನಾ 'Yogi for PM' ಎಂಬ ಹೋರ್ಡಿಂಗ್ ಸ್ಥಾಪಿಸಿತ್ತು.ಇದನ್ನು ಗಮನಿಸಿದ ಆಗ್ರಾ ಮೇಯರ್ ನವೀನ್ ಜೈನ್, ತಕ್ಷಣವೇ ಆ ಹೋರ್ಡಿಂಗ್‍ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.