ADVERTISEMENT

ಪಪ್ಪು, ತಪ್ಪು, ಅಕ್ಕು; ಮಹಾತ್ಮಾ ಗಾಂಧಿಯ 3 ಹೊಸ ಕೋತಿಗಳು: ಸಿಎಂ ಯೋಗಿ ವ್ಯಂಗ್ಯ

ಪಿಟಿಐ
Published 3 ನವೆಂಬರ್ 2025, 7:36 IST
Last Updated 3 ನವೆಂಬರ್ 2025, 7:36 IST
<div class="paragraphs"><p>ಯೋಗಿ ಆದಿತ್ಯನಾಥ್</p></div>

ಯೋಗಿ ಆದಿತ್ಯನಾಥ್

   

ಪಿಟಿಐ ಚಿತ್ರ

ದರ್ಬಾಂಗ್: ‘ಕಾಂಗ್ರೆಸ್, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷಗಳು ಅಪರಾಧಿಗಳನ್ನು ಬೆಂಬಲಿಸುತ್ತಿವೆ. ಈ ಮೂಲಕ ಬಿಹಾರ ರಾಜ್ಯದ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿವೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದರ್ಬಾಂಗ್‌ನಲ್ಲಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಯೋಗಿ, ಆರ್‌ಜೆಡಿ-ಕಾಂಗ್ರೆಸ್ ಆಳ್ವಿಕೆಯಲ್ಲಿ, ರಾಜ್ಯದಲ್ಲಿ ಬಡವರಿಗೆ ಸಿಗುತ್ತಿದ್ದ ಪಡಿತರವನ್ನು ಲೂಟಿ ಮಾಡಲಾಯಿತು ಎಂದು ಆರೋಪಿಸಿದರು.

ಇದೇ ವೇಳೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಪಪ್ಪು’, ಆರ್‌ಜೆಡಿಯ ತೇಜಸ್ವಿ ಯಾದವ್ ‘ತಪ್ಪು’ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ‘ಅಕ್ಕು’ ಎಂದು ಲೇವಡಿ ಮಾಡಿದರು. ಜತೆಗೆ, ಇವರು ಮಹಾತ್ಮಾ ಗಾಂಧಿಯವರ ಮೂರು ಹೊಸ ಕೋತಿಗಳು ಎಂದು ವ್ಯಂಗ್ಯವಾಡಿದರು.

ಈ ಮೂರು ಜನ ಜಾತಿ ಮತ್ತು ಗಲಭೆಗಳ ಮೂಲಕ ದೇಶದ ಜನರನ್ನು ವಿಭಜನೆಗೊಳಿಸಿದ್ದಾರೆ ಎಂದು ದೂರಿದರು.