ADVERTISEMENT

ಇಂಡೋ–ಪಾಕ್ ಕ್ರಿಕೆಟ್ ಬಗ್ಗೆ ಮೊದಿ, ಇಮ್ರಾನ್ ಬಳಿ ಕೇಳಿ: ಸೌರವ್ ಗಂಗೂಲಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 11:03 IST
Last Updated 17 ಅಕ್ಟೋಬರ್ 2019, 11:03 IST
   

ಕೊಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕಿದ್ದರೆಅದಕ್ಕೆ ಎರಡೂ ದೇಶಗಳಅನುಮತಿ ಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್‌ ಪ್ರಧಾನಿ ಇಮ್ರಾನ್ಖಾನ್ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಯನಿಯೋಜಿತಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಗುರುವಾರ ಕೊಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು ‘ಇಂಡೋ–ಪಾಕ್‌ ಕ್ರಿಕೆಟ್‌ನ ಬಗ್ಗೆ ಪ್ರಶ್ನೆಗಳೇನೇ ಇದ್ದರೂ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಬಳಿ ಕೇಳಬೇಕು. ಅಂತರರಾಷ್ಟ್ರೀಯಕ್ರಿಕೆಟ್‌ ಪಂದ್ಯದ ಆಯೋಜನೆಯು ಸರ್ಕಾರಗಳ ಮಟ್ಟದ ವಿಚಾರ. ಈ ಬಗ್ಗೆ ಉತ್ತರಿಸಲು ನಾನುಅಧಿಕೃತ ವ್ಯಕ್ತಿ ಅಲ್ಲ,’ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ 2012ರಲ್ಲಿ ಕ್ರಿಕೆಟ್‌ ಸರಣಿ ನಡೆದಿತ್ತು.ಈ ಸರಣಿಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು

ADVERTISEMENT

ಪುಲ್ವಾಮ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಮನೆ ಮಾಡಿರುವ ಮುನಿಸು ಕ್ರಿಕೆಟ್‌ ಮೇಲೂ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.