ADVERTISEMENT

ಮುಂಬೈನಿಂದ ತ್ರಿಶೂರ್‌ವರೆಗೆ ಸ್ಕೇಟಿಂಗ್‌ ಪ್ರಯಾಣ! ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 14:52 IST
Last Updated 17 ಡಿಸೆಂಬರ್ 2024, 14:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ಮುಂಬೈನಿಂದ ಕೇರಳದವರೆಗೂ ಅತ್ಯಂತ ವೇಗವಾಗಿ ಸ್ಕೇಟಿಂಗ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಸುಬ್ರತೋ ಮಂಡಲ್ ಮುಂಬೈನಲ್ಲಿ ನೆಲೆಸಿದ್ದಾರೆ. ಸುಬ್ರತೋ ಅವರು, ಕಳೆದ ಆರು ದಿನದ ಹಿಂದೆ ಮುಂಬೈನಿಂದ ಸ್ಕೇಟಿಂಗ್‌ ಆರಂಭಿಸಿ, 1,300 ಕಿ.ಮೀ ದೂರ ಕ್ರಮಿಸಿ ಕೇರಳದ ತ್ರಿಶ್ಶೂರ್‌ನಲ್ಲಿದ್ದ ತಮ್ಮ ಸಹೋದರನನ್ನು ಭೇಟಿಯಾಗಿದ್ದರು‌.

ADVERTISEMENT

’ಮಾರ್ಗದ ಮಧ್ಯೆ ವಾಹನಕ್ಕಿಂತಲೂ ಅತ್ಯಂತ ವೇಗದಲ್ಲಿ ಸ್ಕೇಟಿಂಗ್ ಮಾಡಿದ್ದೇನೆ‘ ಎಂದು ಸುಬ್ರತೋ ಹೇಳಿಕೊಂಡಿದ್ದರು. 

ಅತ್ಯಂತ ದಟ್ಟಣೆಯ ಮಾರ್ಗಗಳಲ್ಲಿ ವೇಗವಾಗಿ ಸ್ಕೇಟಿಂಗ್ ಮಾಡಿ, ಇತರರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಕೇರಳದ ಪೊಲೀಸರು ಬಂಧಿಸಿದ್ದಾರೆ.

‘ನಗರದ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಯುವಕನೊಬ್ಬ ಸ್ಕೇಟಿಂಗ್‌ ಮಾಡುತ್ತಿರುವ ಕುರಿತು ದೂರು ಬಂದಿತ್ತು. ಮಂಗಳವಾರ ಬಂಧಿಸಲಾಗಿದೆ’ ಎಂದು ತ್ರಿಶ್ಶೂರ್‌ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್‌ ಜಿಜೊ ತಿಳಿಸಿದರು.

‘ಮಂಡಲ್‌ ಕ್ಷೌರಿಕ ವೃತ್ತಿ ಮಾಡುತ್ತಿದ್ದು, ಸ್ಕೇಟಿಂಗ್‌ನಲ್ಲಿ ಉತ್ತಮ ನೈಪುಣ್ಯತೆ ಹೊಂದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.