ADVERTISEMENT

ವೈಎಸ್‌ಆರ್‌ ಕಾಂಗ್ರೆಸ್‌ನ ವಿವೇಕಾನಂದ ರೆಡ್ಡಿ ಹತ್ಯೆ

ಪಿಟಿಐ
Published 15 ಮಾರ್ಚ್ 2019, 19:53 IST
Last Updated 15 ಮಾರ್ಚ್ 2019, 19:53 IST
ವಿವೇಕಾನಂದ ರೆಡ್ಡಿ
ವಿವೇಕಾನಂದ ರೆಡ್ಡಿ   

ಅಮರಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಅವರ ಕಿರಿಯ ತಮ್ಮ, ಮಾಜಿ ಸಚಿವ ವೈ.ಎಸ್‌. ವಿವೇಕಾನಂದ ರೆಡ್ಡಿ (68) ಕಡಪದ ತಮ್ಮ ನಿವಾಸದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಇದು ಸಹಜ ಸಾವಲ್ಲ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ರೆಡ್ಡಿ ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ರೆಡ್ಡಿದೇಹದಲ್ಲಿ ಹರಿತವಾದ ಚಾಕುವಿನಿಂದಇರಿದಿರುವ ಗಾಯಗಳು ಕಂಡು ಬಂದಿವೆಎಂದು ವೈದ್ಯರು ನೀಡಿರುವ ಶವಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ.

ಕಡಪ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ದೇವ್‌ ಶರ್ಮಾ ಇದು ಸಹಜ ಸಾವಲ್ಲಹತ್ಯೆ ಎಂಬುದನ್ನು ಖಚಿತಪಡಿಸಿದ್ದಾರೆ. ವಿವೇಕಾನಂದ ರೆಡ್ಡಿ ಅವರ ದೇಹದಲ್ಲಿ 7 ಇರಿದ ಗಾಯಗಳು ಹಾಗೂ ತಲೆಯಲ್ಲಿ 2ಗಾಯಗಳು ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ವಿವೇಕಾನಂದ ರೆಡ್ಡಿ ಅವರತಮ್ಮನ ಮಗ ಹಾಗೂ ಮಾಜಿ ಸಂಸದ ಅವಿನಾಶ್‌ ರೆಡ್ಡಿ 'ಇದು ಅನುಮಾನಾಸ್ಪದಸಾವಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದ್ದರು. ಈ ಘಟನೆ ಸಂಬಂಧ ಆಂಧ್ರಪ್ರದೇಶ ಸರ್ಕಾರ ಹಿರಿಯ ಪೊಲೀಸ್‌ ಅಧಿಕಾರಿ ಅಮಿತ್‌ ಗಾರ್ಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.

ವಿವೇಕಾನಂದ ರೆಡ್ಡಿ ಕಡಪ ಜಿಲ್ಲೆಯ ಮೈದುಕೂರು ವಿಧಾನಸಭಾ ಕ್ಷೇತ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು. ಪ್ರಸ್ತುತ ಅವರು ಪುಲಿವೆಂದುಲನಿವಾಸದಲ್ಲಿ ವಾಸವಾಗಿದ್ದರು.

ಕೊಠಡಿ ಹಾಗೂ ಶೌಚಾಲಯದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದು ಸ್ವಾಭಾವಿಕ ಸಾವಲ್ಲ ಎಂದು ವಿವೇಕಾನಂದ ರೆಡ್ಡಿಯವರ ಸಹಾಯಕ ಎಂ. ವಿ. ಕೃಷ್ಣ ರೆಡ್ಡಿ ಪುಲಿವೆಂದುಲ ಠಾಣೆಯಲ್ಲಿ ದೂರು ನೀಡಿದ್ದಾರೆ.

‘ಈ ಸಾವಿನ ಹಿಂದೆ ದೊಡ್ಡ ಪಿತೂರಿ ಇದೆ. ಅವರ ತಲೆ ಮುಂಭಾಗ ಮತ್ತು ಹಿಂಭಾಗದಲ್ಲಿ ಗಾಯಗಳಾಗಿವೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಸೋದರಳಿಯ, ಮಾಜಿ ಸಚಿವ ಅವಿನಾಶ್‌ ರೆಡ್ಡಿ ಹೇಳಿದ್ದಾರೆ.

‘ಗುರುವಾರ ರಾತ್ರಿ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಬೆಳಿಗ್ಗೆ ನಾನು ಅವರ ಮನೆಗೆ ಹೋದಾಗ ರೆಡ್ಡಿಯವರು ಎದ್ದಿರಲಿಲ್ಲ. ಕೊಠಡಿಯಿಂದ ಹೊರ ಬರಲಿಲ್ಲ. ಆಗ ಅನುಮಾನಗೊಂಡು ಹೋಗಿ ನೋಡಿದಾಗ ಶೌಚಾಲಯದಲ್ಲಿ ಬಿದ್ದಿದರು. ಶೌಚಾಲಯ ಹಾಗೂ ಹಾಸಿಗೆ ಬಳಿ ರಕ್ತದ ಕಲೆಗಳಿದ್ದವು’ ಎಂದು ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.