ADVERTISEMENT

ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿ ಯೂಸುಫ್‌ ಮೆಮನ್‌ ಜೈಲಿನಲ್ಲೇ ಸಾವು 

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 13:17 IST
Last Updated 26 ಜೂನ್ 2020, 13:17 IST
   

ಮುಂಬೈ: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಯೂಸುಫ್ ಮೆಮನ್ ನಾಸಿಕ್ ಜೈಲಿನಲ್ಲಿ ಶುಕ್ರವಾರ ಸಾವಿಗೀಡಾಗಿದ್ದಾನೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯೂಸುಫ್, 1993ರ ಮುಂಬೈ ಸರಣಿ ಸ್ಫೋಟದ ಸಂಚುಕೋರ ಟೈಗರ್ ಮೆಮನ್‌ನ ಕಿರಿಯ ಸಹೋದರ. ಟೈಗರ್‌ ಮೇಮನ್‌ ಸದ್ಯ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದಾನೆ.

ಯೂಸುಫ್ ಮೆಮನ್‌ನ ಹಿರಿಯ ಸಹೋದರ ಯಾಕೂಬ್ ಮೆಮನ್‌ನನ್ನು ಕೆಲವು ವರ್ಷಗಳ ಹಿಂದೆ ನಾಗ್ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.

ADVERTISEMENT

ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಮೆಮನ್‌ನ ತಂದೆ ಅಬ್ದುಲ್ ರಜಾಕ್ಮೆಮನ್‌ ಮತ್ತು ತಾಯಿ ಹನೀಫಾ ಸೇರಿದಂತೆಮೆಮನ್ಕುಟುಂಬದ ಆರು ಮಂದಿಯನ್ನು ಸಿಬಿಐ 1994ರಲ್ಲಿ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.