ADVERTISEMENT

ಜುಬಿನ್‌ ಗರ್ಗ್‌ ಸಾವು ಪ್ರಕರಣ: ರಾಜೀನಾಮೆ ನೀಡಿದ ಅಸ್ಸಾಂ ಮುಖ್ಯ ಮಾಹಿತಿ ಆಯುಕ್ತ

ಪಿಟಿಐ
Published 6 ನವೆಂಬರ್ 2025, 15:34 IST
Last Updated 6 ನವೆಂಬರ್ 2025, 15:34 IST
<div class="paragraphs"><p>ಗಾಯಕ ಜುಬಿನ್‌ ಗರ್ಗ್‌ ಸಾವಿ</p></div>

ಗಾಯಕ ಜುಬಿನ್‌ ಗರ್ಗ್‌ ಸಾವಿ

   

ಗುವಾಹಟಿ: ಅಸ್ಸಾಂನ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ಭಾಸ್ಕರ್‌ ಜ್ಯೋತಿ ಮಹಂತ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಖ್ಯಾತ ಗಾಯಕ ಜುಬಿನ್‌ ಗರ್ಗ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಂತ ಅವರ ಕಿರಿಯ ಸಹೋದರ ಶ್ಯಾಮಕಾನು ಅವರನ್ನು ಬಂಧಿಸಲಾಗಿದೆ. ಶ್ಯಾಮಕಾನು ಅವರಿಗೆ ಸರ್ಕಾರ ನೀಡಿರುವ ಅನುದಾನದ ಮಾಹಿತಿ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ಅಸ್ಸಾಂನ ಮಾಜಿ ಡಿಜಿಪಿ ಕೂಡ ಆಗಿರುವ ಮಹಂತ ಅವರು ತಮ್ಮ ರಾಜೀನಾಮೆಯ ಕುರಿತು ಫೇಸ್‌ಬುಕ್‌ನಲ್ಲಿ ತಿಳಿಸಿದ್ದು, ಈಗಾಗಲೇ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾಗಿ ಹೇಳಿದ್ದಾರೆ. 

‘ಖ್ಯಾತ ಗಾಯಕ ಜುಬಿನ್‌ ಗರ್ಗ್‌ ಸಾವಿನೊಂದಿಗೆ ಶ್ಯಾಮಕಾನು ಮಹಂತ ಹೆಸರು ತಳಕುಹಾಕಲಾಗಿದೆ. ಶ್ಯಾಮಕಾನು ಕುರಿತು ಯಾವುದೇ ಮಾಹಿತಿ ಕೇಳಿ ಯಾರಾದರೂ ಅರ್ಜಿ ಸಲ್ಲಿಸಿದರೆ, ಅವರ ಮನಸ್ಸಿನಲ್ಲಿ ಯಾವುದೇ ಅನುಮಾನ ಮೂಡಬಾರದು ಎಂಬ ಉದ್ದೇಶದಿಂದ ಈ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದಾಗಿ ನನ್ನ ಆತ್ಮಸಾಕ್ಷಿ ಹೇಳುತ್ತಿತ್ತು’ ಎಂದು ತಿಳಿಸಿದ್ದಾರೆ.

ರಾಜೀನಾಮೆ ನಿರ್ಧಾರದ ಕುರಿತು ಈ ಹಿಂದೆಯೇ ಮುಖ್ಯಮಂತ್ರಿ ಕಚೇರಿಗೆ ತಿಳಿಸಿರುವುದಾಗಿಯೂ ಮಹಂತ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.