ADVERTISEMENT

ಜುಬಿನ್‌ ಸಾವು: ಅಸ್ಸಾಂನಲ್ಲಿ ಕಳೆಗುಂದಿದ ದುರ್ಗಾ ಪೂಜೆ ಸಂಭ್ರಮ

ಪಿಟಿಐ
Published 30 ಸೆಪ್ಟೆಂಬರ್ 2025, 14:16 IST
Last Updated 30 ಸೆಪ್ಟೆಂಬರ್ 2025, 14:16 IST
ಗಾಯಕ ಜುಬಿನ್ ಗರ್ಗ್
ಗಾಯಕ ಜುಬಿನ್ ಗರ್ಗ್   

ಗುವಾಹಟಿ: ಖ್ಯಾತ ಗಾಯಕ ಜುಬಿನ್ ಗರ್ಗ್ ಸಾವಿನ ಕಾರಣದಿಂದಾಗಿ ಅಸ್ಸಾಂನಲ್ಲಿ ಈ ಬಾರಿ ದುರ್ಗಾ ಪೂಜೆಯ ಸಂಭ್ರಮ ಕಳೆಗುಂದಿದೆ. ದುರ್ಗಾ ಪೂಜೆಯ ಹಲವು ಆಯೋಜಕರು ಕೇವಲ ಪೂಜಾ ಕೈಂಕರ್ಯಗಳನ್ನಷ್ಟೇ ನಡೆಸಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.

ಹಲವು ಪೂಜಾ ಸಮಿತಿಗಳ ಮುಖ್ಯಸ್ಥರು ಮಾತನಾಡಿ,‘ ಜುಬಿನ್‌ ಅವರು ಇತ್ತೀಚೆಗಷ್ಟೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಸರಿಯಲ್ಲ. ಆದರೆ, ವಾರ್ಷಿಕ ದುರ್ಗಾ ಪೂಜೆಯೂ ಬಹಳ ಮುಖ್ಯವಾಗಿರುವ ಕಾರಣ ಕೇವಲ ಪೂಜಾ ಕಾರ್ಯಕ್ರಮಗಳನ್ನಷ್ಟೇ ನಡೆಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ. 

ಮಾಲಿಗಾಂವ್‌ ಕಾಳಿಬಡಿ ದುರ್ಗಾ ಪೂಜಾ ಸಮಿತಿಯು ಈ ಬಾರಿ ತನ್ನ ಅಮೃತ ಮಹೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಜುಬಿನ್‌ ಅವರ ನಿಧನದ ಕಾರಣದಿಂದಾಗಿ ನಿಗದಿಯಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ.

ADVERTISEMENT

ಇತ್ತ ಗುವಾಹಟಿ ದುರ್ಗಾ ಪೂಜಾ ಸಮಿತಿ ಕೂಡ ಕೇವಲ ಪೂಜಾ ಕೈಂಕರ್ಯ ನಡೆಸುವುದಾಗಿ ಹೇಳಿದೆ. ಎಲ್ಲಾ ದುರ್ಗಾ ಪೂಜಾ ಪೆಂಡಾಲ್‌ಗಳಲ್ಲೂ ಜುಬಿನ್‌ ಅವರ ಗೌರವಾರ್ಥ ಅವರ ಫೋಟೋ ಇಟ್ಟು ಪೂಜೆ ಸಲ್ಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.