ADVERTISEMENT

ಕೇರಳ: ಶಾಲೆಗಳಲ್ಲಿ ಜುಂಬಾ ನೃತ್ಯ; ಮುಸ್ಲಿಂ ಸಂಘಟನೆ ವಿರೋಧ

ಪಿಟಿಐ
Published 27 ಜೂನ್ 2025, 14:46 IST
Last Updated 27 ಜೂನ್ 2025, 14:46 IST
ಜುಂಬಾ ನೃತ್ಯ (ಸಾಂದರ್ಭಿಕ ಚಿತ್ರ)
ಜುಂಬಾ ನೃತ್ಯ (ಸಾಂದರ್ಭಿಕ ಚಿತ್ರ)   

ತಿರುವನಂತಪುರಂ: ಮಾದಕ ವಸ್ತು ವಿರೋಧಿ ಅಭಿಯಾನದ ಭಾಗವಾಗಿ ಕೇರಳದ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪರಿಚಯಿಸಿದ ‘ಜುಂಬಾ ನೃತ್ಯ’ ಕಾರ್ಯಕ್ರಮಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

‘ಈ ನೃತ್ಯವು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಈ ಕಾರ್ಯಕ್ರಮದ ಬಗ್ಗೆ ಪೋಷಕರು ಯೋಚಿಸಬೇಕು’ ಎಂದು ಸಮಸ್ತ ಕೇರಳ ಸುನ್ನಿ ಯುವಜನ ಸಂಘಂ (ಎಸ್‌ಐಎಸ್‌) ರಾಜ್ಯ ಕಾರ್ಯದರ್ಶಿ ಅಬ್ದುಸ್ಸಮದ್‌ ಪೊಕ್ಕೊಟ್ಟೂರ್‌ ಅವರು ಫೇಸ್‌ಬುಕ್‌ನಲ್ಲಿ ಶುಕ್ರವಾರ ಪೋಸ್ಟ್‌ ಮಾಡಿದ್ದಾರೆ.

‘ಮಕ್ಕಳು ಹಾಗೂ ಸಾರ್ವಜನಿಕರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸಲು ಜುಂಬಾ ನೃತ್ಯ ಸಹಕಾರಿಯಾಗಿದೆ’ ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್‌. ಬಿಂದು ಅವರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ನೃತ್ಯ ಹಾಗೂ ಏರೋಬಿಕ್‌ ಸಂಯೋಜನೆಯ ಜುಂಬಾ ನೃತ್ಯ ಮಾಡುವುದರಿಂದ ಮಕ್ಕಳಲ್ಲಿನ ಒತ್ತಡ ನಿವಾರಣೆ ಮಾಡಲು ಹಾಗೂ ಯುವ ಜನರು ಮಾದಕ ವಸ್ತುಗಳಿಂದ ದೂರವಿರಲು ಸಹಕಾರಿಯಾಗುತ್ತದೆ ಎಂದು ಜುಂಬಾ ನೃತ್ಯವನ್ನು ಪರಿಚಯಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೂಚಿಸಿದ್ದರು.

ಕೆಲ ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜುಂಬಾ ನೃತ್ಯ ತರಬೇತಿ ನೀಡಲು ಆರಂಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.