ADVERTISEMENT

ಕೋವಿಡ್‌: ಜೈಡಸ್‌ ಕಂಪನಿಯ 'ವಿರಾಫಿನ್‌' ತುರ್ತು ಬಳಕೆಗೆ ಡಿಸಿಜಿಐ ಅನುಮತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 11:10 IST
Last Updated 23 ಏಪ್ರಿಲ್ 2021, 11:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜೈಡಸ್‌ ಕ್ಯಾಡಿಲಾ ಕಂಪನಿಯ ವೈರಸ್‌ ಪ್ರತಿರೋಧಕ ಔಷಧಿ ‘ವಿರಾಫಿನ್‌’ ಅನ್ನು ಕೋವಿಡ್‌ ರೋಗಿಗಳ ತುರ್ತು ಬಳಕೆಗಾಗಿ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇಲಾಖೆ ಶುಕ್ರವಾರ ಅನುಮತಿ ನೀಡಿದೆ.

ಸೌಮ್ಯ ಲಕ್ಷಗಳು ಇರುವ ವಯಸ್ಕ ಕೋವಿಡ್‌ ರೋಗಿಗಳಿಗೆ ‘ವಿರಾಫಿನ್‌’ ಔಷಧಿಯನ್ನು ಮಿತಿಗೆ ಒಳಪಟ್ಟು ತುರ್ತು ಬಳಕೆಗೆ ನೀಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಜೈಡಸ್‌ ಕ್ಯಾಡಿಲಾ ಕಂಪನಿತಿಳಿಸಿದೆ.

ಸೌಮ್ಯ ಲಕ್ಷಗಳು ಇರುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಈ ಔಷಧಿ ಹೆಚ್ಚು ಪರಿಣಾಮಕಾರಿಯಾಗಿದೆ.ಆರಂಭದಲ್ಲೇ ಈ ಔಷಧಿ ನೀಡುವುದರಿಂದ ಕೋವಿಡ್‌ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲುಮತ್ತು ಹೆಚ್ಚಿನ ಅಪಾಯ ತಪ್ಪಿಸಲು ಸಹಕಾರಿಯಾಗಿದೆ ಎಂದು ಕ್ಯಾಡಿಲಾ ಕಂಪನಿ ತಿಳಿಸಿದೆ.

ADVERTISEMENT

ವೈದ್ಯಕೀಯ ತಜ್ಞರ ಸಲಹೆಯ ಮೇಲೆ ‘ವಿರಾಫಿನ್‌’ ನೀಡಬಹುದು. ಈ ಔಷಧ ಭಾರತೀಯಮಾರುಕಟ್ಟೆಯಲ್ಲಿ ಲಭ್ಯವಿದೆ.

ಭಾರತದಾದ್ಯಂತ 20-25 ಕೇಂದ್ರಗಳಲ್ಲಿ ‘ವಿರಾಫಿನ್‌’ ಬಳಕೆಯ ಪ್ರಯೋಗವನ್ನು ನಡೆಸಲಾಗಿದೆ. ಇದುಆಮ್ಲಜನಕದ ಕಡಿಮೆ ಅಗತ್ಯವನ್ನು ತೋರಿಸಿದೆ. ಹಾಗೇ ಉಸಿರಾಟದ ತೊಂದರೆ ನಿಯಂತ್ರಿಸಲು ಈ ಔಷಧಿ ಸಮರ್ಥವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.