ಕಾರ್ಕಳ (ಉಡುಪಿ ಜಿಲ್ಲೆ): ತಾಲ್ಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಬಳಿ ಜೋಕಾಲಿ ಆಟ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ.
ಲಕ್ಷ್ಮಣ ಪೂಜಾರಿ ಅವರ ಪುತ್ರಿ ಮಾನ್ವಿ (9) ಮೃತ ಬಾಲಕಿ.
ಸಂಬಂಧಿ ಉದಯ ಪೂಜಾರಿ ಅವರ ಮನೆಯ ಬಳಿ ನೆರೆಮನೆಯ ಮಕ್ಕಳ ಜೊತೆ ಶುಕ್ರವಾರ ಸಂಜೆ ಜೋಕಾಲಿ ಆಡುವಾಗ ದುರ್ಘಟನೆ ಸಂಭವಿಸಿದೆ. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಯಿತಾದರೂ ಬಾಲಕಿ ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.