ADVERTISEMENT

ಅಕ್ಟೋಬರ್‌ 6ರಿಂದ 10ರವರೆಗೆ ನೀನಾಸಂ ಸಂಸ್ಕೃತಿ ಶಿಬಿರ

‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ವಿಷಯ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 17:21 IST
Last Updated 1 ಅಕ್ಟೋಬರ್ 2018, 17:21 IST
ಸಾಗರಕ್ಕೆ ಸಮೀಪದ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರ
ಸಾಗರಕ್ಕೆ ಸಮೀಪದ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರ   

ಸಾಗರ: ಸಮೀಪದ ಹೆಗ್ಗೋಡಿನಲ್ಲಿ ಅ. 6ರಿಂದ 10ರವರೆಗೆ ನೀನಾಸಂ ಸಂಸ್ಕೃತಿ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಉಪನ್ಯಾಸ, ಚರ್ಚೆ, ಸಂವಾದ, ಕಿರು ನಾಟಕ ಪ್ರದರ್ಶನವಿದ್ದು, ರಾತ್ರಿ 7ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಬಾರಿಯ ಶಿಬಿರವು ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ಎಂಬ ವಿಷಯವನ್ನು ಕೇಂದ್ರೀಕರಿಸಿದೆ. ಈ ಕುರಿತ ಉಪನ್ಯಾಸ, ಚರ್ಚೆಯಲ್ಲಿ ಡಾ. ಚಂದ್ರಶೇಖರ ಕಂಬಾರ, ಗೋಪಾಲ ಗುರು, ಪ್ರಕಾಶ್ ಆಮ್ಟೆ, ವೈದೇಹಿ, ಪೃಥ್ವಿದತ್ತ ಚಂದ್ರ ಶೋಭಿ, ತ್ರಿದೀಪ್ ಸುಹ್ಮದ್, ಕ್ಲಾಡ್ ಆಳ್ವಾರಸ್, ನಾರ್ಮಾ ಆಳ್ವಾರಸ್, ಸಮೀಕ್ ಬಂದೋಪಾಧ್ಯಾಯ, ಎಂ.ಎಸ್. ಶ್ರೀರಾಮ್, ವಿವೇಕ ಶಾನಭಾಗ, ಜಿ.ಎಸ್. ಜಯದೇವ್, ಸಂಜೀವ ಕುಲಕರ್ಣಿ, ಕೃಷ್ಣಮೂರ್ತಿ ಹನೂರು, ಶಿವಾನಂದ ಕಳವೆ, ದೀಪಾ ಗಣೇಶ್, ಶಿವಾನಂದ ಕೆರೆಮನೆ, ಸುಂದರ್ ಸಾರುಕೈ, ಸುಕನ್ಯಾ ರಾಮಗೋಪಾಲ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.

ಅ.6ರಂದು ‘ಯಲ್ಲಮ್ಮ ಕತೆಗಳು’ ಕಥನ-ಗಾಯನ ಪ್ರಯೋಗ,‘ಸೇತುಬಂಧನ’ನಾಟಕ ಪ್ರದರ್ಶನಗೊಳ್ಳಲಿದೆ. ಅ.7ರಂದು ‘ನಾರಿಬಾಯಿ’ ಏಕವ್ಯಕ್ತಿ ರಂಗ ಪ್ರಯೋಗ,‘ಆಶ್ಚರ್ಯ ಚೂಡಾಮಣಿ’ ನಾಟಕ, ಅ.8ರಂದು ‘ಮೋಹನ ಸ್ವಾಮಿ’ ಕಿರು ರಂಗ ಪ್ರಯೋಗ,‘ಈಡಿಪಸ್’ ನಾಟಕ, ಅ.9ರಂದು‘ಮದುವೆ ಹೆಣ್ಣು’ ಕಿರು ರಂಗ ಪ್ರಯೋಗ, ತಮಿಳು ನಾಟಕ ‘ಪೂಳಿ
ಪ್ಪಾವೈ’, ಅ.10ರಂದು ‘ವಾಕ್’ ರಂಗಪ್ರಸ್ತುತಿ ಮತ್ತು‘ಕೊಳ’ ನಾಟಕ ಪ್ರದರ್ಶನವಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.