ಬೆಂಗಳೂರು: ವಕೀಲರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಹೈಕೋರ್ಟ್ ಎರಡು ಆಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದೆ. ಎರಡನ್ನೂ ಈಗ ಪ್ರಾಯೋಗಿಕವಾಗಿ ನೀಡಲಾಗಿದೆ.
ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರು ತಮಗೆ ಆಸಕ್ತಿ ಇರುವ ಪ್ರಕರಣಗಳ ಮಾಹಿತಿ ಪಡೆದುಕೊಳ್ಳುವ ಅವಕಾಶವನ್ನು ಮೊದಲನೆಯ ಅಪ್ಲಿಕೇಷನ್ ಮೂಲಕ ನೀಡಲಾಗಿದೆ. ಹೈಕೋರ್ಟ್‌ನ ಪ್ರತಿ ಕೊಠಡಿಯಲ್ಲಿ ವಿಚಾರಣೆಗೆ ಬರಲಿರುವ ಪ್ರಕರಣಗಳು, ಆದೇಶಗಳ ಪ್ರಮಾಣೀಕೃತ ಪ್ರತಿ, ಪ್ರಕರಣಗಳ ವಿಚಾರಣೆ ಎಲ್ಲಿಗೆ ಬಂದಿದೆ ಎಂಬ ಮಾಹಿತಿಯನ್ನೂ ಪಡೆದುಕೊಳ್ಳಬಹುದು.
ಎರಡನೆಯ ಅಪ್ಲಿಕೇಷನ್ ಬಳಸಿ, ಹೈಕೋರ್ಟ್ ವೆಬ್‌ಸೈಟ್‌ನ ಯಾವುದೇ ಪುಟಕ್ಕೆ ನೇರವಾಗಿ ಹೋಗಬಹುದು. ಎರಡನೆಯ ಅಪ್ಲಿಕೇಷನ್ ತುಸು ಲಘು ಸ್ವರೂಪದ್ದು. ಎರಡೂ ಆಂಡ್ರಾಯ್ಡ್ ಅಪ್ಲಿಕೇಷನ್‌ಗಳು ಹೈಕೋರ್ಟ್ ವೆಬ್ಸೈಟ್ನಲ್ಲಿ (http://karnatakajudiciary.kar.nic.in/) ಲಭ್ಯವಿವೆ.
ಈ ಬಗ್ಗೆ ಯಾವುದೇ ಸಲಹೆ ಅಥವಾ ಸೂಚನೆಗಳನ್ನು shhcourt@nic.in ಇ–ಮೇಲ್ ವಿಳಾಸಕ್ಕೆ ಕಳುಹಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.