ADVERTISEMENT

ಆರ್‌ಟಿಪಿಎಸ್‌: ಮೂರು ವಿದ್ಯುತ್‌ ಘಟಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದ 3, 5 ಮತ್ತು 7 ನೇ ಘಟಕಗಳ ವಿದ್ಯುತ್‌ ಉತ್ಪಾದನೆಯು ಶುಕ್ರವಾರ ಸ್ಥಗಿತಗೊಂಡಿದೆ. ಆರ್‌ಟಿಪಿಎಸ್‌ನ 8 ಘಟಕಗಳ ವಿದ್ಯುತ್‌ ಉತ್ಪಾದನೆ ಒಟ್ಟು 1,720 ಮೆಗಾವಾಟ್‌ ಸಾಮಾರ್ಥ್ಯ ಹೊಂದಿದೆ. ಈ ಮೂರು ಘಟಕಗಳ ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ 800 ಮೆಗಾವಾಟ್‌ ಉತ್ಪಾದನೆಯಾಗುತ್ತಿದೆ.

3ನೇ ಘಟಕ ವಾರ್ಷಿಕ ನಿರ್ವಹಣೆ (ಓರಲಿಂಗ್‌) ಕಾರ್ಯದ ನಿಮಿತ್ತ ಸ್ಥಗಿತವಾಗಿದೆ. 5ನೇ ಘಟಕದ ಬಾಯ್ಲರ್‌ ಟ್ಯೂಬ್‌ ಸೋರಿಕೆಯಲ್ಲಿ ದೋಷ ಕಂಡಿದೆ. 7ನೇ ಘಟಕದಲ್ಲಿ ಅರ್ಥಿಂಗ್‌ ದೋಷ ಕಾಣಿಸಿಕೊಂಡ  ಹಿನ್ನೆಲೆಯಲ್ಲಿ ಈ ಮೂರು ಘಟಕ ಸ್ಥಗಿತಗೊಳಿಸಲಾಗಿದೆ. 7ನೇ ಘಟಕ ರಾತ್ರಿ ವೇಳೆಗೆ ಉತ್ಪಾದನೆ ಕಾರ್ಯ ಆರಂಭಿಸಲಿದೆ ಎಂದು ಆರ್‌ಟಿಪಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೇಣುಗೋಪಾಲ ತಿಳಿಸಿದರು.

ಇದರಿಂದ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಶುಕ್ರವಾರ ದಿನವಿಡೀ ಆಗಾಗ್ಗೆ ವಿದ್ಯುತ್‌ ಕಡಿತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.