ADVERTISEMENT

ಆಶ್ರಯ:1085 ಕೋಟಿ ಬಡ್ಡಿ ಮನ್ನಾ ಚಿಂತನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 17:50 IST
Last Updated 2 ಫೆಬ್ರುವರಿ 2011, 17:50 IST

ಬೆಂಗಳೂರು ‘ಅನೇಕ ವರ್ಷಗಳಿಂದ ಈ ಹಣ ಬಾಕಿ ಇದೆ. ಬಡ್ಡಿ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ’ ಎಂದು ಸುದ್ದಿಗಾರರಿಗೆ   ತಿಳಿಸಿದರು.

ಸಾಲ ತೀರಿದರೆ ಫಲಾನುಭವಿ ಹೆಸರಿಗೆ ಮೂಲ ದಾಖಲೆಗಳು ವರ್ಗಾವಣೆಯಾಗುತ್ತವೆ. ಹೀಗಾಗಿ ಸಾಲ ತೀರಿಸಲು ಮುಂದೆ ಬರುತ್ತಾರೆ ಎಂಬ ವಿಶ್ವಾಸವಿದೆ. ಬಡ್ಡಿ ಮನ್ನಾ ಮಾಡುವುದರಿಂದ 14-15 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.

2010-11 ಮತ್ತು 2011-12ರಲ್ಲಿ ಒಟ್ಟು 2.96 ಲಕ್ಷ ಆಶ್ರಯ ಮನೆಗಳನ್ನು ನಿರ್ಮಿಸಲಾಗುವುದು. ವರ್ಷಕ್ಕೆ ಒಂದು ಸಾವಿರದಂತೆ 196 ವಿಧಾನ ಸಭಾ ಕ್ಷೇತ್ರಗಳಲ್ಲಿ ಎರಡು ವರ್ಷಗಳಲ್ಲಿ ಈ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, 86 ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಮನೆಗೆ ಕೇಂದ್ರ ಸರ್ಕಾರ ರೂ 33,000 ನೀಡಲಿದ್ದು, ರಾಜ್ಯ ಸರ್ಕಾರ ರೂ 63,000   ವೆಚ್ಚಮಾಡಲಿದೆ. 2012-13ರ ಒಳಗೆ 6 ರಿಂದ 8 ಲಕ್ಷ ಮನೆಗಳನ್ನು ನಿರ್ಮಿಸುವ ಮೂಲಕ ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡಲಾಗುವುದು. ಮೂರು ತಿಂಗಳಲ್ಲಿ ಇನ್ನೂ ಎರಡು ಲಕ್ಷ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.