ADVERTISEMENT

ಉತ್ತರಾಖಂಡಕ್ಕೆ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಬೆಂಗಳೂರು: ರಾಜ್ಯದ ಯಾತ್ರಿಗಳ ಸುರಕ್ಷತೆಗಾಗಿ ಕರ್ನಾಟಕ ಸರ್ಕಾರ ಮೂವರು ಅಧಿಕಾರಿಗಳ ತಂಡವನ್ನು ರವಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವೀನ್ ರಾಜ್ ಸಿಂಗ್, ಹೇಮಂತ್ ನಿಂಬಾಳ್ಕರ್, ಕರಿಗೌಡ ಅವರ ತಂಡವು ಡೆಹ್ರಾಡೂನ್‌ಗೆ ತಲುಪಿದೆ. ಅವರ ಮೊಬೈಲ್ ಸಂಖ್ಯೆ 09412574052, 09449845678, 09448110100.

ಹೃಷಿಕೇಶ, ಡೆಹ್ರಾಡೂನ್‌ನಲ್ಲಿರುವ ರಾಜ್ಯದ ಯಾತ್ರಿಗಳು ನವದೆಹಲಿಗೆ ಬರುವುದಕ್ಕೂ ಸರ್ಕಾರ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ದೆಹಲಿಯಲ್ಲಿ ಉಳಿಯುವುದು ಮತ್ತು ಕರ್ನಾಟಕಕ್ಕೆ ವಾಪಸು ಬರಲು ವ್ಯವಸ್ಥೆ ಮಾಡಲಾಗಿದೆ. ನವದೆಹಲಿಯ ಕರ್ನಾಟಕ ಭವನದ ಮೊಬೈಲ್ ಸಂಖ್ಯೆ 09868393971, 09868393989.

ಉತ್ತರ ಪ್ರದೇಶ ಸರ್ಕಾರವು ್ಙ25 ಕೋಟಿ ಸಹಾಯ ನೀಡುವುದಾಗಿ ಹೇಳಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯ ಯಾತ್ರಾರ್ಥಿಗಳಿಗೆ ನೆರವು ನೀಡಲು ರೂ10 ಕೋಟಿ ಹಾಗೂ ಮಧ್ಯಪ್ರದೇಶ ಸರ್ಕಾರ ರೂ 5 ಕೋಟಿ ನೆರವು ಘೋಷಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.