ADVERTISEMENT

ಕಲಾವಿಮರ್ಶಕ ಅನಿಲ್‌ಕುಮಾರ್‌ಗೆ ಬಿ.ಸಿ ಸನ್ಯಾಲ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2013, 19:59 IST
Last Updated 9 ಜನವರಿ 2013, 19:59 IST
ಕಲಾವಿಮರ್ಶಕ ಅನಿಲ್‌ಕುಮಾರ್‌ಗೆ ಬಿ.ಸಿ ಸನ್ಯಾಲ್ ಪ್ರಶಸ್ತಿ
ಕಲಾವಿಮರ್ಶಕ ಅನಿಲ್‌ಕುಮಾರ್‌ಗೆ ಬಿ.ಸಿ ಸನ್ಯಾಲ್ ಪ್ರಶಸ್ತಿ   

ಬೆಂಗಳೂರು: ಕಲಾ ವಿಮರ್ಶಕ ಮತ್ತು ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕ ಎಚ್.ಎ.ಅನಿಲ್‌ಕುಮಾರ್ ಅವರಿಗೆ ದೆಹಲಿ ಕಲಾ ಶಾಲೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಲಾ ಶಿಕ್ಷಕರಿಗೆ ನೀಡುವ ಪ್ರತಿಷ್ಠಿತ `ಬಿ.ಸಿ.ಸನ್ಯಾಲ್ ಪ್ರಶಸ್ತಿ' ದೊರೆತಿದೆ.

ಇದೇ ಮೊದಲ ಬಾರಿಗೆ ಕರ್ನಾಟಕದ ಕಲಾ ಶಿಕ್ಷಕರೊಬ್ಬರಿಗೆ ಈ ಪ್ರಶಸ್ತಿ ದೊರೆಯುತ್ತಿದೆ. ಎಚ್.ಎ. ಅನಿಲ್‌ಕುಮಾರ್ ಕಲೆಗೆ ಸಂಬಂಧಿಸಿದ ಬರಹಗಳ ಮೂಲಕ ಕನ್ನಡ ಮತ್ತು ಇಂಗ್ಲಿಷ್ ಓದುಗರಿಬ್ಬರಿಗೂ ಪರಿಚಿತರು. ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚಿತ್ರಕಲಾ ಪರಿಷತ್ತಿನ ಹಳೆಯ ವಿದ್ಯಾರ್ಥಿಯೂ ಹೌದು. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಕಲಾ ವಿಮರ್ಶೆಗೆ ಕುರಿತಂತೆ ಉನ್ನತ ಅಧ್ಯಯನ ಮಾಡಿದ್ದಾರೆ.

ಇದರ ಹೊರತಾಗಿ ಯುನೆಸ್ಕೊ-ಆಶ್‌ಬರ್ಗ್ ಫೆಲೋಶಿಪ್‌ನ ಅಡಿಯಲ್ಲಿ ಫಿನ್ಲೆಂಡ್‌ನ ಕಲೆಯ ಕುರಿತು ಅಧ್ಯಯನ ನಡೆಸಿದ್ದರು. ಎರಡು ದಶಕಗಳಿಂದ ಕನ್ನಡದಲ್ಲಿ ಕಲಾ ವಿಮರ್ಶೆಯ ಭಾಷೆಯೊಂದನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿರುವ ಅನಿಲ್ ಕುಮಾರ್ ಕಲೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.