ADVERTISEMENT

ಖಾಸಗಿ ಬಸ್‌ ಪ್ರವೇಶ ನಿಷೇಧ

ನಾಳೆಯಿಂದ 5 ದಿನ ಬೆಳಿಗ್ಗೆ 7ರಿಂದ ರಾತ್ರಿ 10ತನಕ ಅನ್ವಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2016, 19:30 IST
Last Updated 30 ಜನವರಿ 2016, 19:30 IST
ಖಾಸಗಿ ಬಸ್‌ ಪ್ರವೇಶ ನಿಷೇಧ
ಖಾಸಗಿ ಬಸ್‌ ಪ್ರವೇಶ ನಿಷೇಧ   

ಬೆಂಗಳೂರು: ಅರಮನೆ ಮೈದಾನದಲ್ಲಿ ಮೂರು ದಿನ ‘ಇನ್‌ವೆಸ್ಟ್‌ ಕರ್ನಾಟಕ –2016’ ಎಂಬ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದರಿಂದ, ಫೆ. 1ರಿಂದ 5ರವರೆಗೆ ನಗರದೊಳಕ್ಕೆ ಖಾಸಗಿ ಬಸ್‌ಗಳ ಪ್ರವೇಶವನ್ನು ನಿಷೇಧಿಸಿ ನಗರ ಪೊಲೀಸ್ ಕಮಿಷನರ್ ಎನ್‌.ಎಸ್‌. ಮೇಘರಿಕ್ ಶನಿವಾರ ಆದೇಶ ಹೊರಡಿಸಿದ್ದಾರೆ.

ಕಾಂಟ್ರಾಕ್ಟ್‌ ಕ್ಯಾರೇಜ್ ಹಾಗೂ ಅಖಿಲ ಭಾರತ ಪ್ರವಾಸಿ ಪರವಾನಗಿ ಹೊಂದಿರುವ ಖಾಸಗಿ ಬಸ್‌ಗಳಿಗೆ ಮತ್ರ ಈ ಆದೇಶ ಅನ್ವಯಿಸುತ್ತದೆ. ಇವು ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಬೆಂಗಳೂರು ನಗರ ಪ್ರವೇಶಿಸುವಂತಿಲ್ಲ ಎಂದು ಪೊಲೀಸರು ತಿಳಿಸಿದರು.

ಸಮಯ ಬದಲಾಯಿಸಿ: ‘ನಮ್ಮ ಬೇಡಿಕೆ ಮೇರೆಗೆ 10 ದಿನಗಳ ನಿಷೇಧವನ್ನು 5 ದಿನಕ್ಕೆ ಇಳಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಷೇಧಿತ ಸಮಯವನ್ನು ಬೆಳಿಗ್ಗೆ 7 ಬದಲಿಗೆ 8 ಹಾಗೂ ರಾತ್ರಿ 10ರ ಬದಲಿಗೆ 9ರವರೆಗೆ ಬದಲಾಯಿಸಿದರೆ ಅನುಕೂಲ’ ಎಂದು ರಾಜ್ಯ ಪ್ರವಾಸಿ ಬಸ್‌ಗಳ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ  ‘ಪ್ರಜಾವಾಣಿ’ಗೆ ತಿಳಿಸಿದರು.
*
ಎಲ್ಲಿ ಇಳಿಸಬೇಕು?
*ತುಮಕೂರು ರಸ್ತೆ– ನೆಲಮಂಗಲ ಸಮೀಪದ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ
*ಬಳ್ಳಾರಿ ರಸ್ತೆ– ಯಲಹಂಕದ (ಎಪಿಎಂಸಿ) ರೈತರ ಸಂತೆ
*ಮೈಸೂರು ರಸ್ತೆ– ನೈಸ್‌ ರಸ್ತೆ ಸಮೀಪ
*ಹೊಸೂರು ರಸ್ತೆ– ಅತ್ತಿಬೆಲೆ
*ಕನಕಪುರ ರಸ್ತೆ– ತಲಘಟ್ಟಪುರದ ನೈಸ್ ರಸ್ತೆ ಬಳಿ
*ಹಳೆ ಮದ್ರಾಸ್ ರಸ್ತೆ– ಕೆ.ಆರ್‌. ಪುರ ವಾಣಿಜ್ಯ ತೆರಿಗೆ ಚೆಕ್‌ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.