ADVERTISEMENT

ಚನ್ನಪಟ್ಟಣ ತಾಲ್ಲೂಕು ಕೆಂಗಲ್‌ ಬಳಿ ಹಳಿ ಮೇಲೆ ಮರ ಬಿದ್ದು ರೈಲು ಸಂಚಾರಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 16:04 IST
Last Updated 1 ಜೂನ್ 2018, 16:04 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ‌ ಕೆಂಗಲ್ ಬಳಿ ಶುಕ್ರವಾರ ರಾತ್ರಿ ಮರ ಉರುಳಿಬಿದ್ದು, ರೈಲುಗಳ ಸಂಚಾರಕ್ಕೆ ಅಡ್ಡಿಯಾಯಿತು.

ರಾತ್ರಿ 7.30ರ ಸುಮಾರಿಗೆ ಬಿರುಗಾಳಿ ಸಮೇತ ಮಳೆ ಆರಂಭಗೊಂಡಿತ್ತು. ಈ ವೇಳೆಗೆ ಮರ ರೈಲು ಹಳಿಯ ಮೇಲೆ‌ ಉರುಳಿ ಬಿತ್ತು‌. ಇದರಿಂದಾಗಿ ವಿದ್ಯುತ್ ಮಾರ್ಗದಲ್ಲಿನ ತಂತಿಗಳು ತುಂಡಾಗಿದ್ದವು. ಆ ಸಮಯದಲ್ಲಿ ಮೈಸೂರಿಗೆ ತೆರಳುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲಿನ ಗಾಲಿಗಳಿಗೆ ತುಂಡಾದ‌ ವಿದ್ಯುತ್ ತಂತಿಗಳು ಸುತ್ತಿಕೊಂಡವು. ಹೀಗಾಗಿ ಮೈಸೂರು ಕಡೆಗೆ ತೆರಳುವ ರೈಲುಗಳ ಸಂಚಾರವನ್ನು ತಡೆಹಿಡಿಯಲಾಯಿತು.

ಇದರಿಂದಾಗಿ ಕೆಲವು ಗಂಟೆಗಳ ಕಾಲ ರೈಲು ಸಂಚಾರಕ್ಕೆ ಅಡಚಣೆ ಆಗಿತ್ತು. ಕೆಲವು ರೈಲುಗಳು ರಾಮನಗರ, ಬಿಡದಿ ನಿಲ್ದಾಣದಲ್ಲಿ ನಿಂತಿದ್ದವು.

ADVERTISEMENT

ರೈಲ್ವೆ ಸಿಬ್ಬಂದಿ‌ ಸ್ಥಳಕ್ಕೆ ಧಾವಿಸಿದ್ದು, ಮರ ತೆರವು ಹಾಗೂ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯದಲ್ಲಿ‌ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.