ಮೈಸೂರು: ಕನ್ನಡ ಸಾಹಿತ್ಯದ ಹಿರಿಯ ವಿಮರ್ಶಕ ಜಿ.ಎಚ್. ನಾಯಕ ಅವರಿಗೆ 2010ನೇ ಸಾಲಿನ ‘ಪಂಪ ಪ್ರಶಸ್ತಿ’ ಯನ್ನು ಇಲ್ಲಿನ ಅವರ ಸ್ವಗೃಹದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆ ಎದುರು ಶನಿವಾರ ನಡೆದ ಸಾಂಸ್ಕೃತಿಕ ಉದಾ್ಘಟನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಅವರು ನಾಯಕ ಅವರ ಮನೆಗೆ ತೆರಳಿ ಗೌರವಿಸಿದರು. ಪ್ರಶಸ್ತಿಯು ರೂ 3 ಲಕ್ಷ ನಗದು, ನಾಟ್ಯ ಸರಸ್ವತಿ ವಿಗ್ರಹ ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿಯ ಕುರಿತು ಪ್ರತಿಕ್ರಿಯೆ ನೀಡಿದ ಜಿ.ಎಚ್. ನಾಯಕ, ‘ಪಂಪ ಪ್ರಶಸ್ತಿಗೆ ಇರಬೇಕಾದ ಎಲ್ಲ ಅರ್ಹತೆಗಳೂ ನನ್ನ ಲ್ಲಿವೆ. ಒಂದು ವೇಳೆ ಈ ಪ್ರಶಸ್ತಿ ನನಗೆ ದೊರೆಯದೇ ಇದ್ದಿದ್ದರೆ ಕಾಲವೇ ಉತ್ತರ ಕೊಡುತ್ತಿತ್ತು. ಸಾಹಿತಿಗಳ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪನೆ ಮಾಡುವ ಸರ್ಕಾರ, ಅವರ ಗೌರವಕ್ಕೆ ಧಕ್ಕ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಪ್ರಶಸ್ತಿ ಗೆ ಭಾಜನರಾದವರನ್ನೂ ಗೌರವಿಸ ಬೇಕಾದದ್ದು ಸರ್ಕಾರದ ಕರ್ತವ್ಯ. ಔಪಚಾರಿಕ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರೆ ಇಷ್ಟು ಆನಂದವಾಗುತ್ತಿರ ಲಿಲ್ಲ. ಆಪ್ತರಷ್ಟೇ ಇರುವ ಮನೆಗೆ ಸಚಿ ವರೇ ಬಂದು ಪ್ರಶಸ್ತಿ ಪ್ರದಾನ ಮಾಡಿ ರುವುದಕ್ಕೆ ಸಂತಸವಾಗಿದೆ’ ಎಂದರು.
ಸಚಿವೆ ಉಮಾಶ್ರೀ ಮಾತನಾಡಿ, ‘ಕನ್ನಡ ವಿಮರ್ಶಾ ಲೋಕಕ್ಕೆ ನಾಯಕ ಅವರ ಕೊಡುಗೆ ಅಪಾರ. ಸಾಹಿತ್ಯದಲ್ಲಿ ಪ್ರತಿಪಾದಿಸುವ ತತ್ವ, ಮೌಲ್ಯಗಳಿಗೆ ಬದ್ಧ ರಾಗಿ ಬದುಕುತ್ತಿರುವ ಅವರ ಕುಂಟುಬ ವರ್ಗಕ್ಕೆ ಮಾನ್ಯತೆ ನೀಡಬೇಕು. ಈ ಕೆಲಸ ಬಹು ಹಿಂದೆಯೇ ನಡೆಯಬೇಕಾಗಿತ್ತು. ವಿಳಂಬವಾಗಿರುವುದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ನಾಯಕ ಅವರ ಮನಸಿ್ಸಗೆ ತೃಪ್ತಿ ಸಿಗುವ ಸ್ಥಳದಲ್ಲಿಯೇ ಪ್ರಶಸ್ತಿ ಯನ್ನು ನೀಡಲಾಗಿದೆ’ ಎಂದರು.
ಮಹಿಳಾ ಹೋರಾಟಗಾರ್ತಿ ಮೀರಾ ನಾಯಕ, ರಂಗಾಯಣದ ನಿರ್ದೇಶಕ ಜನಾರ್ದನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿ ಕಾರ್ಜುನಸ್ವಾಮಿ, ಬಲವಂತರಾವ್ ಪಾಟೀಲ, ರಂಗಾಯಣದ ಉಪ ನಿರ್ದೇಶಕ ಎಸ್.ಐ.ಭಾವಿಕಟಿ್ಟ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.