ADVERTISEMENT

ಜೈಲಿನಲ್ಲಿ ಕೈದಿಗಳ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಬೇಕರಿಯಲ್ಲಿ ಮದ್ಯ ಸೇವನೆಗೆ ಸಂಬಂಧಿಸಿದಂತೆ ಇಬ್ಬರು ಕೈದಿಗಳ ನಡುವೆ ಆರಂಭಗೊಂಡ ವಾಗ್ವಾದ ತಾರಕಕ್ಕೇರಿ, ಪರಸ್ಪರ ಹೊಡೆದಾಟದಲ್ಲಿ ಒಬ್ಬ ಕೈದಿ ಗಾಯಗೊಂಡ ಘಟನೆ  ಗುರುವಾರ ನಡೆದಿದೆ.

ಮಂಜುನಾಥ ಚಿಕ್ಕತಮ್ಮಯ್ಯ ಅಲಿಯಾಸ್ ಬಳ್ಳಾರಿ ಮಂಜ ಹಾಗೂ ಶಿವಮೊಗ್ಗ ಮಂಜ ಅವರ ನಡುವೆ ಊಟದ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು.

ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡ್ದ್ದಿದರು. ಗಾಯಗೊಂಡ ಬಳ್ಳಾರಿ ಮಂಜನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.