ADVERTISEMENT

ಟಿ.ವಿ 9 ವರದಿಗಾರರಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಬೆಂಗಳೂರು: ಕುಟುಕು ಕಾರ್ಯಾಚರಣೆ ವೇಳೆ ಬಂಧನಕ್ಕೊಳಗಾದ ಟಿ.ವಿ 9 ವಾಹಿನಿಯ ಇಬ್ಬರು ವರದಿಗಾರರಿಗೆ ಲೋಕಾಯುಕ್ತ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ವರದಿಗಾರರಾದ ಶ್ವೇತಾ ಪ್ರಭು ಹಾಗೂ ಶ್ರೇಯಸ್‌ ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಬಾಂಡ್‌ ಹಾಗೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಮೇರೆಗೆ ಜಾಮೀನು ನೀಡಲು ಲೋಕಾಯುಕ್ತ ನ್ಯಾಯಾಧೀಶ ಸುಧೀಂದ್ರ ರಾವ್‌ ಆದೇಶಿಸಿದರು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ವರದಿಗಾರರು ಕುಟುಕು ಕಾರ್ಯಾಚರಣೆ ನಡೆಸುವುದು ಅಪರಾಧವಲ್ಲ. ದುರುದ್ದೇಶದಿಂದ ಕುಟುಕು ಕಾರ್ಯಾಚರಣೆ ನಡೆಸಿದರು ಎಂಬುದಕ್ಕೆ ಪುರಾವೆಗಳು ಇಲ್ಲ. ಹೀಗಾಗಿ ಜಾಮೀನಿಗೆ ಅರ್ಹರು’ ಎಂದು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.