ADVERTISEMENT

ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2016, 20:12 IST
Last Updated 6 ಅಕ್ಟೋಬರ್ 2016, 20:12 IST

ಬೆಂಗಳೂರು: ದ.ರಾ.ಬೇಂದ್ರೆ ಕಾವ್ಯಕೂಟವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ದ.ರಾ.ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ- 10’ ಆಯೋಜಿಸಿದೆ.

ಈ ಸಾಲಿನ ಲೇಖನ ಸ್ಪರ್ಧೆಯ ವಿಷಯ ‘ಬೇಂದ್ರೆ ಕಾವ್ಯದಲ್ಲಿ ಜೀವನ ಮೌಲ್ಯಗಳು’. ಆಸಕ್ತರು 2,500 ಪದಗಳಿಗೆ ಮೀರದಂತೆ ಲೇಖನ ಬರೆಯಬಹುದು.

ಮೊದಲ ಮೂರು ಸ್ಥಾನ ಪಡೆದವರಿಗೆ  ನಗದು ಬಹುಮಾನ ಕೊಡಲಾಗುವುದು. ಲೇಖನಗಳನ್ನು ಕಳುಹಿಸಲು ನ. 19 ಕೊನೆಯ ದಿನಾಂಕ.

ವಿಳಾಸ: ಡಾ.ಜಿ.ಕೃಷ್ಣಪ್ಪ, ಅಧ್ಯಕ್ಷರು, ದ.ರಾ. ಬೇಂದ್ರೆ ಕಾವ್ಯಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ತಿರುವು, ನೇತಾಜಿನಗರ, ಮತ್ತಿಕೆರೆ, ಬೆಂಗಳೂರು– -560054. ಸಂಪರ್ಕ: 99721 09209

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.