ADVERTISEMENT

ದೊಡ್ಡ ಬಸವೇಶ್ವರ ರಥೋತ್ಸವಕ್ಕೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 13:01 IST
Last Updated 17 ಮಾರ್ಚ್ 2014, 13:01 IST

ಕುರುಗೋಡು (ಬಳ್ಳಾರಿ ಜಿಲ್ಲೆ): ಭಾನು­ವಾರ ಸಂಜೆ ಇಲ್ಲಿ ನಡೆದ ದೊಡ್ಡ ಬಸವೇಶ್ವರ ಸ್ವಾಮಿ ಮಹಾರಥೋತ್ಸ­ವಕ್ಕೆ ಜನಸಾಗರವೇ ಹರಿದು ಬಂದಿತ್ತು.

ರಥ ಮತ್ತು ದೊಡ್ಡಬಸವೇಶ್ವರ ಸ್ವಾಮಿ ದರ್ಶನ ಪಡೆಯಲು ಒಂದೂ­ವರೆ ಲಕ್ಷಕ್ಕೂ ಅಧಿಕ ಭಕ್ತರು ಬಂದಿ­ದ್ದರು. ರಥೋತ್ಸವದ ಅಂಗವಾಗಿ  ದೇವ­ಸ್ಥಾನದಲ್ಲಿ ವಿಶೇಷ ಪೂಜೆ ನಡೆ­ದವು. ಭಕ್ತರು ಬೆಳಿಗ್ಗೆಯಿಂದಲೇ ಸಾಲಿ­ನಲ್ಲಿ ನಿಂತು, ದೊಡ್ಡಬಸವೇಶ್ವರ ಸ್ವಾಮಿ ದರ್ಶನ ಪಡೆದರು.
ವಿವಿಧ ಹೂವುಗಳು ಮತ್ತು ಇತರೇ ಅಲಂಕಾರಿಕ ವಸ್ತುಗಳು ಮತ್ತು ಗೊಂಬೆ­ಗಳಿಂದ ಅಲಂಕೃತಗೊಂಡಿದ್ದ 60 ಅಡಿ ಎತ್ತರದ ರಥವನ್ನು ಭಕ್ತರು ಬಸವಣ್ಣ ದೇವಸ್ಥಾನದವರೆಗೆ ಮತ್ತೆ ಅಲ್ಲಿಂದ ಸ್ವಸ್ಥಳಕ್ಕೆ ಎಳೆದರು. ರಥಕ್ಕೆ ಹೂ ಹಣ್ಣು ಎಸೆದು ಹಲವರು ಹರಕೆ ತೀರಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕು ಸೇರಿದಂತೆ ನೆರೆಯ ರಾಯಚೂರು, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಿಂದ ಮತ್ತು ಆಂಧ್ರಪ್ರದೇಶ­ದಿಂದಲೂ ಭಕ್ತರು ಬಂದಿದ್ದರು. ಇಲ್ಲಿನ ಸುಂಕಲಮ್ಮದೇವಿ ದೇವಸ್ಥಾನ, ಕಲ್ಲುಗು­ಡೇಶ್ವರ ದೇವಸ್ಥಾನ, ಕೋಟೆ ಆಂಜನೇ­ಯ­­ಸ್ವಾಮಿ ದೇವಸ್ಥಾನ, ಆಂಜನೇಯ­ಸ್ವಾಮಿ ದೇವಸ್ಥಾನ, ಬಾದನಹಟ್ಟಿಯ ಮೂರು ದೇವಸ್ಥಾನ­ಗಳಲ್ಲಿ ಅನ್ನ­ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.