ಹುಣಸೂರು: ಟಿಬೆಟನ್ ಧರ್ಮಗುರು ದಲೈಲಾಮಾ ಅವರು ಹುಣಸೂರು ತಾಲ್ಲೂಕಿನ ಗುರುಪುರ ಟಿಬೆಟನ್ ಕ್ಯಾಂಪ್‌ಗೆ ಜುಲೈ 12ರಂದು ಆಗಮಿಸಲಿದ್ದು, ಜುಲೈ 16ರವರೆಗೆ ಪ್ರವಚನ ನೀಡಲಿದ್ದಾರೆ ಎಂದು ರಬ್ಜೆಲಿಂಗ್ ಟಿಬೆಟನ್ ಸೆಟ್ಲಮೆಂಟ್ ಕಚೇರಿ ತಿಳಿಸಿದೆ.
ಧರ್ಮಗುರು ದಲೈಲಾಮಾ ಕ್ಯಾಂಪ್ ಭೇಟಿ ಸಮಯದಲ್ಲಿ ಜೋಕರ್ ಚೋಡೆ ಮತ್ತು ಗುಡೈ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲಿದ್ದಾರೆ.
ಧರ್ಮಗುರುಗಳು ಯಮಂಟಕ ಆಸಕ್ತಿ (ದ್ರಾನಕ್ ಚುಸೋಮ್) ಜೋಂಕರ್ ಚೋಡೆ ವಹಾಹತುಗಳಲ್ಲಿ ತಾಂತ್ರಿಕ ವಿಶ್ವವಿದ್ಯಾನಿಲಯದ ಬಗ್ಗೆ ಪ್ರವಚನ ನೀಡಲಿದ್ದಾರೆ.
ಹಬ್ಬದ ವಾತಾವರಣ: ಗುರುಪುರ ಟಿಬೆಟನ್ ಕ್ಯಾಂಪ್‌ನಲ್ಲಿ ಈಗ ಹಬ್ಬದ ವಾತಾವರಣ ಕಾಣುತ್ತಿದೆ.
ಕ್ಯಾಂಪ್ ಪ್ರವೇಶದ್ವಾರದಿಂದ ಟಿಬೆಟನ್ ಧರ್ಮದ ಮಹತ್ವ ಸಾರುವ ವಿವಿಧ ಘೋಷಣೆಗಳನ್ನು ಹೊತ್ತ ಬ್ಯಾನರ್‌ಗಳು ಮತ್ತು ಬಟ್ಟೆಯಿಂದ ಸಿದ್ಧಗೊಳಿಸಿದ ತೋರಣಗಳು ಕ್ಯಾಂಪ್‌ಗಳಲ್ಲಿ ರಾರಾಜಿಸುತ್ತಿವೆ.
ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಧೂಪಗಳ ಕುಂಡಗಳು ರಂಗು ಪಡೆದಿವೆ. ಹಿರಿಯ ತಲೆಮಾರಿನ ಟಿಬೆಟ್ ನಾಗರಿಕರು ಅಲ್ಲಲ್ಲಿ ಧರ್ಮಗ್ರಂಥ ಪಠಿಸುತ್ತಿದ್ದಾರೆ. ದಲೈಲಾಮಾ ಭೇಟಿ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.