
ಪ್ರಜಾವಾಣಿ ವಾರ್ತೆರಾಯಚೂರು: ದೇವದುರ್ಗ ತಾಲ್ಲೂಕಿನಿಂದ ವಿವಿಧೆಡೆಗೆ ಅಕ್ರಮವಾಗಿ ಮರಳು ಸಾಗಣೆ ಮಾಡಲು ನಕಲಿ ರಾಯಲ್ಟಿ ಪರ್ಮಿಟ್ ತಯಾರಿಸುತ್ತಿದ್ದ ಜಾಲವನ್ನು ಪತ್ತೆ ಮಾಡಿರುವ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಪೊಲೀಸರು, ಈ ಸಂಬಂಧ ಏಳು ಜನರನ್ನು ಬಂಧಿಸಿದ್ದಾರೆ.
’ನಕಲಿ ಪತ್ರದ ಮೇಲೆ ಹಾಲೊಗ್ರಾಂ ಮತ್ತು ಬಾರ್‌ಕೋಡ್ ಹಾಕುತ್ತಿದ್ದರಿಂದ ಸುಲಭವಾಗಿ ಪತ್ತೆಯಾಗುತ್ತಿರಲಿಲ್ಲ. ಸ್ಥಗಿತಗೊಂಡಿರುವ ಮರಳು ದಾಸ್ತಾನು ಕೇಂದ್ರದ ಹೆಸರು ಉಲ್ಲೇಖಿಸಿ ಪರ್ಮಿಟ್ ತಯಾರಿಸಿದ್ದರಿಂದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಈ ಅಕ್ರಮ ವ್ಯವಹಾರವನ್ನು ನಾಲ್ಕು ತಿಂಗಳಿನಿಂದ ಮಾಡುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.