ADVERTISEMENT

ಪ್ರಜಾವಾಣಿ ಶೈಕ್ಷಣಿಕ ನೆರವು ನಿಧಿ: ವಿದ್ಯಾರ್ಥಿಗಳ ಅನಿಸಿಕೆ...

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ನಂದಿನಿ ನಾಯ್ಕ
ನಂದಿನಿ ನಾಯ್ಕ   

‘ಕನಸಿಗೆ ಭದ್ರತೆ ಒದಗಿಸಿತು’

ಕಾರವಾರ: ‘ಪ್ರಜಾವಾಣಿ ನೆರವು’ ನನ್ನ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನನಗೆ ಸೀಟು ದೊರಕಿತು. ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದೇನೆ. ಎಂಬಿಬಿಎಸ್‌ ಓದುವ ಕನಸು ಹೊತ್ತಿರುವ ನನಗೆ ‘ಪ್ರಜಾವಾಣಿ’ ನೆರವು ನನ್ನ ಕನಸಿಗೆ ಭದ್ರತೆ ಒದಗಿಸಿತು. ಥ್ಯಾಂಕ್ಸ್ ಟು ‘ಪ್ರಜಾವಾಣಿ’.

–ನಂದಿನಿ ನಾಯ್ಕ, ಮಾಸೂರು ಕ್ರಾಸ್, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

ADVERTISEMENT

‘ಶುಲ್ಕ ಭರಿಸಲು ನೆರವಾಯಿತು’

ಸಮಯಕ್ಕೆ ಸರಿಯಾಗಿ ಸಿಕ್ಕ ನೆರವಿನಿಂದ  ಶುಲ್ಕ ಭರಿಸಲು ಹಾಗೂ ಪುಸ್ತಕಗಳನ್ನು ಕೊಂಡುಕೊಳ್ಳಲು ಸಹಾಯವಾಯಿತು. ಸದ್ಯ ದ್ವಿತೀಯ ಪಿಯುಗೆ ದಾಖಲಾಗಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯೊಂದಿಗೆ ಓದು ಆರಂಭಿಸಿದ್ದೇನೆ. ನೆರವು ನೀಡಿದ್ದಕ್ಕೆ ಧನ್ಯವಾದ.

ಆರ್‌.ವೇಣುಗೋಪಾಲ್‌, ಮಾಗಡಿ, ರಾಮನಗರ ಜಿಲ್ಲೆ

ನೆರವು ಆಸರೆಯಾಯಿತು

ಕಾರವಾರ: ಬಡ ಕುಟುಂಬದವಳಾಗಿದ್ದ ನನಗೆ ಓದುವ ಕನಸಿತ್ತು. ಆದರೆ, ಕಾಲೇಜಿಗೆ ಪ್ರವೇಶ ಶುಲ್ಕ ತುಂಬಲು ಆರ್ಥಿಕ ಸಂಕಷ್ಟ ಉಂಟಾಗಿತ್ತು. ಆಗ, ‘ಪ್ರಜಾವಾಣಿ ಶೈಕ್ಷಣಿಕ ನೆರವು’ ಸಹಾಯಕ್ಕೆ ಬಂದಿತು. ಅದರಿಂದ ಕಾಲೇಜು ಪ್ರವೇಶ ಶುಲ್ಕವನ್ನು ಭರಿಸಿದೆ. ‘ನೆರವು’ ನನಗೆ ಬಹಳ ನೆರವಾಯಿತು.

–ಧನ್ಯಾ ಭಂಡಾರಿ, ಹೆರವಟ್ಟಾ, ಕುಮಟಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.