ADVERTISEMENT

ಪ್ರತಿಭಟನೆ ನಡುವೆ ‘ಕಾಲಾ’ ಪ್ರದರ್ಶನ

ಸಿನಿಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:45 IST
Last Updated 7 ಜೂನ್ 2018, 19:45 IST
 ರಜನೀಕಾಂತ್
ರಜನೀಕಾಂತ್   

ಬೆಂಗಳೂರು: ರಜನೀಕಾಂತ್ ನಟನೆಯ ‘ಕಾಲಾ’ ಸಿನಿಮಾ ಗುರುವಾರ ಕರ್ನಾಟಕದಾದ್ಯಂತ ಬಿಡುಗಡೆಯಾಗಿದೆ.

ಈ ಸಿನಿಮಾ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಬುಧವಾರ ಸಂಜೆಯಿಂದಲೇ ಚಿತ್ರಮಂದಿರಗಳ ಮುಂದೆ ಟಿಕೆಟ್ ಮಾರಾಟ ಮಾಡದಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಗುರುವಾರ ಬೆಳಿಗ್ಗೆ ಕೂಡ ಪ್ರತಿಭಟನೆ ನಡೆಯುತ್ತಿದ್ದರಿಂದ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿಯೂ ‘ಕಾಲಾ’ ಚಿತ್ರದ ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ನಗರದ ಮಂತ್ರಿ ಸ್ಕ್ವೇರ್ ಎದುರಿಗೆ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಭಾಗವಹಿಸಿದ್ದರು.

ADVERTISEMENT

ಆದರೆ, ಮಧ್ಯಾಹ್ನದ ಹೊತ್ತಿಗೆ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರಪ್ರದರ್ಶನ ಆರಂಭವಾಯಿತು. ಈ ಷೋಗಳ ಟಿಕೆಟ್‌ಗಳಿಗಾಗಿ ನೂಕುನುಗ್ಗಲು ಉಂಟಾಯಿತು. ಈ ಸಿನಿಮಾ ಬುಧವಾರ ಸಿಂಗಪುರದಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರದಿಂದಲೇ ವೀಕ್ಷಕರೊಬ್ಬರು ಫೇಸ್‌ಬುಕ್‌ ಲೈವ್‌ ಮಾಡಿದ್ದು, ಒಂದು ಗಂಟೆಯ ದೃಶ್ಯ ಸೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.