ADVERTISEMENT

ಪ್ರತ್ಯೇಕ ಅಪಘಾತ: 11 ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST
ಪ್ರತ್ಯೇಕ ಅಪಘಾತ: 11 ಸಾವು
ಪ್ರತ್ಯೇಕ ಅಪಘಾತ: 11 ಸಾವು   

ಕನಕಪುರ: ತಾಲ್ಲೂಕಿನ ಕಬ್ಬಾಳಮ್ಮ ದೇವಿಯ ದರ್ಶನಕ್ಕೆಂದು ಬಂದ ಒಂದೇ ಕುಟುಂಬದ 9 ಮಂದಿ ಭೀಕರ ಅಪಘಾತದಲ್ಲಿ ಸಾವನಪ್ಪಿದ ದಾರುಣ ಘಟನೆ ಭಾನುವಾರ ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರು ಬೆಂಗಳೂರಿನ ಕೆಂಗೇರಿ ಉಪನಗರದ ಬಳಿಯ ನಾಗದೇವನಹಳ್ಳಿ, ಮಾಗಡಿ ತಾಲ್ಲೂಕಿನ ಹಾಗಲಕೋಟೆಯ ಗೊಲ್ಲರಹಟ್ಟಿ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
 
ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ನಾಲ್ವರು ಪುರುಷರು ಮೃತಪಟ್ಟಿದ್ದು ಅವರನ್ನು ಬಳೆ ತಿಪ್ಪಯ್ಯ, ಚಿಕ್ಕಣ್ಣ, ಎಲಿಯಪ್ಪ, ರಾಜು, ಗಂಗಮ್ಮ, ಚಿಕ್ಕಮ್ಮ, ಮಂಜು, ವೀರಣ್ಣ ಮತ್ತು ಚಿಕ್ಕರಾಜು ಎಂದು ಗುರುತಿಸಲಾಗಿದೆ.

ಭಾನುವಾರ ರಜೆಯಿದ್ದುದರಿಂದ ಕುಟುಂಬ ಸದಸ್ಯರೆಲ್ಲಾ ಟಾಟಾ ಏಸ್ ವಾಹನ ಮಾಡಿಕೊಂಡು ಬೆಳಿಗ್ಗೆಯೇ ಕಬ್ಬಾಳು ಗ್ರಾಮಕ್ಕೆ ಬಂದ್ದ್ದಿದರು. ದೇವಿಯ ದರ್ಶನ ಪಡೆದು ಚನ್ನಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದರು. 

 ಈ ಸಂದರ್ಭದಲ್ಲಿ ಇಂದಿರಾನಗರದ ಬಳಿಯ ಸೇತುವೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಸೇತುವೆ ಮೇಲಿಂದ ಪಲ್ಟಿ ಹೊಡೆದಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 15 ಮಂದಿಯಿದ್ದು 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಒಬ್ಬರು ಹಾಗೂ ಆಸ್ಪತ್ರೆಮೃತಪಟ್ಟಿದ್ದಾರೆ.
14 ಜನರು ಗಂಭೀರವಾಗಿ ಗಾಯಗೊಂಡಿದ್ದು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

 ಆಕ್ರಂದನ: ಘಟನೆಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿ ಸುತ್ತಮುತ್ತಲ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನೆರವಾದರು. ಗಾಯಾಳುಗಳ ಚೀರಾಟದ ಆಕ್ರಂದನ ಮುಗಿಲು ಮುಟ್ಟಿತ್ತು.

ಮತ್ತೊಂದು ಅಪಘಾತ: ಚಾಲಕನ ನಿಯಂತ್ರಣ ತಪ್ಪಿದ ಇಂಡಿಕಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ ಘಟನೆ ಹಾರೋಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿ ದೇವರ ಕಗ್ಗಲಹಳ್ಳಿ ಮತ್ತು ರಸ್ತೆ ಜಕ್ಕಸಂದ್ರ ಮಧ್ಯದಲ್ಲಿ ಭಾನುವಾರ ಸಂಭವಿಸಿದೆ. 

 ಮೃತಪಟ್ಟವರನ್ನು ಹಾಸನ ಜಿಲ್ಲೆಯ ಅರಸಿಕೆರೆ ಗ್ರಾಮದ ವಾಸಿ ಸಂತೋಷ್‌ಕುಮಾರ್ (22) ಮತ್ತು ಬೆಂಗಳೂರಿನ ಪುಟ್ಟೇನಹಳ್ಳಿ ವಾಸಿ ಪ್ರಶಾಂತ್ (28) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.