ADVERTISEMENT

ಫ್ರಾನ್ಸಿಸ್ ಸೆರಾವೋ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 19:30 IST
Last Updated 19 ಮಾರ್ಚ್ 2014, 19:30 IST

ಬೆಂಗಳೂರು: ಶಿವಮೊಗ್ಗ ಧರ್ಮ­ಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ಕರ್ನಾಟಕ ಯೇಸುಸಭೆಯ ಮುಖ್ಯಸ್ಥ ಫ್ರಾನ್ಸಿಸ್ ಸೆರಾವೋ ಅವರನ್ನು ಪೋಪ್ ಫ್ರಾನ್ಸಿಸ್‌ ಅವರು ಬುಧ­ವಾರ ನೇಮಕ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡ­ಬಿದಿರೆಯ ಫ್ರಾನ್ಸಿಸ್‌ ಸೆರಾವೋ ಅವರು 1922ರ ಏಪ್ರಿಲ್‌ 30ರಂದು ಮಂಗಳೂರಿನ ಧರ್ಮಾಧ್ಯಕ್ಷರಾಗಿದ್ದ ಬೇಸಿಲ್‌ ಡಿಸೋಜಾ ಅವರಿಂದ ಗುರು­ದೀಕ್ಷೆ ಸ್ವೀಕರಿಸಿದ್ದರು. ಬಳಿಕ ಅವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಧರ್ಮಕೇಂದ್ರದಲ್ಲಿ ಧರ್ಮಗುರುವಾಗಿದ್ದರು.

ಆ ನಂತರ ಆನೇಕಲ್‌ನ ಸಂತ ಜೋಸೆಫರ ಧರ್ಮಕೇಂದ್ರದ ಧರ್ಮ­ಗುರು­ಗಳಾಗಿ, ಯೇಸುಸಭೆಯ ಪ್ರಾಂತೀಯ ದೈವಶಾಸ್ತ್ರ ಕೇಂದ್ರದ ಮೇಲ್ವಿ­ಚಾರಕರಾಗಿದ್ದರು. 2004ರಿಂದ 2009ರವರೆಗೆ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನ ರೆಕ್ಟೆರ್‌ ಆಗಿ ಸೇವೆ ಸಲ್ಲಿಸಿದ್ದಾರೆ. 2009ರಿಂದ ಕರ್ನಾಟಕ ಯೇಸುಸಭೆಯ ಮುಖ್ಯಸ್ಥರಾಗಿ  ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.