ಬೆಂಗಳೂರು (ಪಿಟಿಐ): ಬೆನ್ನತ್ತಿದ ಅಕ್ರಮ ಗಣಿ ಭೂತದಿಂದ ಅಧಿಕಾರ ಕಳೆದುಕೊಂಡು ಹೈರಾಣಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದದ ಅಕ್ರಮ ಗಣಿಗಾರಿಕೆಗೆ ಸಂಬಂಧಿತ ಎಫ್‌ಐಆರ್ ಒಂದನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದ್ದು, ಇದರಿಂದ `ಆರೋಪಮುಕ್ತ~ರಾಗುವ ಆತುರದಲ್ಲಿರುವ ಬಿಎಸ್‌ವೈ ಕೊಂಚ ನಿರಾಳರಾಗಿದ್ದಾರೆ.
ಸರ್ಕಾರಕ್ಕೆ ಸಲ್ಲಿಸಲಾದ ಲೋಕಾಯುಕ್ತ ವರದಿಯ ಆಧಾರದ ಮೇಲೆ ಕಳೆದ ಆಗಸ್ಟ್‌ನಲ್ಲಿ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ವಿರುದ್ದ ಎಫ್‌ಐಆರ್ ಒಂದನ್ನು ದಾಖಲಿಸಿದ್ದರು.
ಅಲ್ಲದೇ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬಿಎಸ್‌ವೈ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು.
ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಕ್ತವತ್ಸಲ ಹಾಗೂ ಗೊವಿಂದರಾಜು ಅವರನ್ನು ಒಳಗೊಂಡ ವಿಭಾಗೀಯ ಪೀಠವು ಎಫ್‌ಆರ್‌ಐ ರದ್ದುಗೊಳಿಸಿದೆ.
ಇದೇ ಸಂದರ್ಭದಲ್ಲಿ ಪೀಠವು `ಪ್ರಕರಣ ಕುರಿತಂತೆ ತಮಗೆ ವಿವರಣೆ ನೀಡಲು ಅವಕಾಶ ಕೊಡದೇ ತಮ್ಮ ವಿರುದ್ದ ಕ್ರಮಗೊಳ್ಳಲಾಗಿದೆ~ ಎಂಬ ಯಡಿಯೂರಪ್ಪ ಅವರ ವಾದವನ್ನು ಎತ್ತಿ ಹಿಡಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.