ADVERTISEMENT

ಬೆಂಗಳೂರು : ರಂಜಾನ್ ಪ್ರಯುಕ್ತ ನಗರದಲ್ಲಿ ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 13:05 IST
Last Updated 19 ಆಗಸ್ಟ್ 2012, 13:05 IST
ಬೆಂಗಳೂರು : ರಂಜಾನ್ ಪ್ರಯುಕ್ತ ನಗರದಲ್ಲಿ ಬಿಗಿ ಬಂದೋಬಸ್ತ್
ಬೆಂಗಳೂರು : ರಂಜಾನ್ ಪ್ರಯುಕ್ತ ನಗರದಲ್ಲಿ ಬಿಗಿ ಬಂದೋಬಸ್ತ್   

ಬೆಂಗಳೂರು : ಈಶಾನ್ಯ ರಾಜ್ಯಗಳ ಜನರು ಭೀತಿಯಿಂದ ಬೆಂಗಳೂರು ತೊರೆದಿರುವ ಹಿನ್ನೆಲೆಯಲ್ಲಿ ರಂಜಾನ್ (ಆಗಸ್ಟ್ 20) ಪ್ರಯುಕ್ತ ನಗರದಲ್ಲಿ ಎಂದೂ ಕೇಳರಿಯದ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡಿದೆ. ನಗರ ತೊರೆದಿರುವ ಅಸ್ಸಾಂ ಜನರನ್ನು ಮರಳಿ ಕರೆಸಿಕೊಳ್ಳುವ ದೃಷ್ಟಿಯಿಂದಲೂ ಈ ಕ್ರಮ ಕೈಗೊಳ್ಳಲಾಗಿದೆ.

ರಂಜಾನ್ (ಈದ್-ಉಲ್-ಫಿತರ್) ದಿನ ಒಟ್ಟು 17 ಸಾವಿರಕ್ಕೂ ಹೆಚ್ಚು ಪೊಲೀಸರು ಇಡೀ ನಗರವನ್ನು ಕಟ್ಟೆಚ್ಚರದಿಂದ ಕಾಯಲಿದ್ದಾರೆ. ರಂಜಾನ್ ದಿನ ಅಥವಾ ನಂತರ ಇಲ್ಲಿರುವ ಅಸ್ಸಾಂ ಜನರ ಮೇಲೆ ದಾಳಿ ನಡೆಯುವದಾಗಿ ವದಂತಿಗಳು ಹಬ್ಬಿದ್ದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆಯ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಭಾನುವಾರ ತಿಳಿಸಿದರು.

ಒಟ್ಟು 3 ಸಿಆರ್‌ಪಿಎಫ್ (Central Reserve Police Force), 3 ಆರ್‌ಎಎಫ್ (Rapid Action Force), 25 ಕೆಎಸ್ಆರ್‌ಪಿ (Karnataka State Reserve Police) ತುಕುಡಿಗಳು ನಗರದಲ್ಲಿ ಗಸ್ತು ತಿರುಗಲಿವೆ. 1500 ತರಬೇತಿ ಪೋಲಿಸರು ಜೊತೆಗೆ 600 ಹೋಂ ಗಾರ್ಡ್‌ಗಳ ಸೇವೆಯನ್ನು ಪಡೆಯಲಾಗುತ್ತಿದೆ.

ADVERTISEMENT

ಜನ ನಿಬಿಡ ಪ್ರದೇಶಗಳಾದ ರೈಲು ನಿಲ್ದಾಣ, ಬಸ್ ನಿಲ್ದಾಣ, ಬೃಹತ್ ಅಂಗಡಿ ಸಮುಚ್ಚಯಗಳ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ. ಹಾಗೆಯೇ, ಅಸ್ಸಾಂ ಯುವಕರು ಹೆಚ್ಚಿರುವ ಪ್ರದೇಶಗಳಲ್ಲಿಯೂ ಪೊಲೀಸರು ಹೆಚ್ಚಿನ ನಿಗಾ ವಹಿಸಲಿದ್ದಾರೆ. ರಂಜಾನ್ ದಿನ ಸಾರ್ವಜನಿಕ ರಜಾದಿನವಾಗಿದ್ದರೂ ಅನೇಕ ಖಾಸಗಿ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸದೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.