ADVERTISEMENT

ಬೆಳಗಾವಿ: ಸಿಡಿಲಿಗೆ ಸಹೋದರರ ಬಲಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಳಗಾವಿ: ಭಾನುವಾರ ಸಂಜೆ ಮತ್ತು ಸೋಮವಾರ ಜಿಲ್ಲೆಯಲ್ಲಿ ಭಾರಿ ಗಾಳಿ ಮಳೆ ಮತ್ತು ಸಿಡಿಲಿಗೆ ಇಬ್ಬರು ಸೋದರರು ಸೇರಿ, ಮೂವರು ಬಲಿಯಾಗಿದ್ದಾರೆ.

ರಾಯಬಾಗ ತಾಲ್ಲೂಕಿನ ಕಟಕಬಾವಿ ಗ್ರಾಮದ ಧನಗರ ತೋಟದಲ್ಲಿ ನಾಲ್ಕು ಮನೆಗಳ ಛಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್‌ಗಳು ಹಾರಿಹೋಗಿವೆ. ಮನೆಗಳಿಗೆ ಹಾನಿ ಆಗಿದೆ. ಸಿಮೆಂಟ್ ಶೀಟ್‌ಹಾಗೂ ಬಿದಿರುಗಳು ತಲೆಯ ಮೇಲೆ ಬಿದ್ದು ಧನಗರ ತೋಟದ ವಾಸಿ ಫಕೀರಪ್ಪ ಲಕ್ಷ್ಮಣ ಧನಗರ (58) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಹಶೀಲ್ದಾರ ಬಿ.ಡಿ. ಗುಗರಟ್ಟಿ ತಿಳಿಸಿದ್ದಾರೆ.

ತಾಲ್ಲೂಕಿನ ಸಾಂವಗಾಂವ ಬಳಿ ಭಾನುವಾರ ಸಂಜೆ ಕುರಿ ಮೇಯಿಸಲು ಹೋಗಿದ್ದ ಹೊನ್ನಿಹಾಳ ಗ್ರಾಮದ ಬಾಗಪ್ಪ ನಾಗಪ್ಪ ಮಲ್ಲನಗೋಳ (34) ಹಾಗೂ ಭರಮ ನಾಗಪ್ಪ ಮಲ್ಲನಗೋಳ (30) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಇತರೆಡೆ ಮಳೆ:ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಗುಡುಗು, ಸಿಡಿಲು ಸಮೇತ ಮಳೆಯಾಗಿದೆ.ಅಂಕಮ್ಮನಾಳ್ ಗ್ರಾಮದಲ್ಲಿ ಆರು ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಸಂಡೂರು ಪಟ್ಟಣದಲ್ಲಿ ಸೋಮವಾರ ಈ ತಿಂಗಳಲ್ಲಿಯೇ ಅಧಿಕ ಎಂದರೆ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ  ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.